Ballari | ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಸಂಡೂರಿನ ನಾಲ್ವರು ಶಿಕ್ಷಕರ ನೇಮಕ

ನಾಮನಿರ್ದೇಶಿತ ಸದಸ್ಯರಿಗೆ ಆದೇಶ ಪತ್ರ ವಿತರಣೆ

Update: 2026-07-27 19:29 IST

ಸಂಡೂರು/ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಬಳ್ಳಾರಿಯ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಸಂಡೂರು ಶಿಕ್ಷಣ ಇಲಾಖೆಯ ನಾಲ್ವರು ಶಿಕ್ಷಕರಿಗೆ ಜಿಲ್ಲಾ ಸಂಘದ ವತಿಯಿಂದ ಆದೇಶ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು.

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಸದಾನಂದಪ್ಪ ನೆಲ್ಕುದ್ರಿ ಅವರು ನೂತನ ನಾಮನಿರ್ದೇಶಿತ ಸದಸ್ಯರಿಗೆ ಆದೇಶ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಸಂಡೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ್ ಅವರು ನೂತನ ಸದಸ್ಯರನ್ನು ಸ್ವಾಗತಿಸಿ, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನೌಕರರ ಹಿತಾಸಕ್ತಿಗಾಗಿ ಸೇವೆ ಸಲ್ಲಿಸುವಂತೆ ಕರೆ ನೀಡಿದರು.

ಜಿಲ್ಲಾ ಸಂಘದ ನಾಮನಿರ್ದೇಶಿತ ಸದಸ್ಯರಾಗಿ ಮುಖ್ಯ ಶಿಕ್ಷಕರಾದ ರುದ್ರಯ್ಯಸ್ವಾಮಿ ಎಸ್., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷ್ಣಾನಗರದ ಶಿಕ್ಷಕ ಬಿ. ಶ್ರೀನಿವಾಸ ಮೂರ್ತಿ, ಸರ್ಕಾರಿ ಪ್ರೌಢಶಾಲೆ ಎಪಿಎಂಸಿ ಸಂಡೂರಿನ ಆಂಗ್ಲ ಪಂಡಿತ ಸುಭಾನ್ ಸಾಹೇಬ್ ಎಂ. ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯ ಕೃಷ್ಣಾನಗರದ ಸಹ ಶಿಕ್ಷಕ ರಾಘವೇಂದ್ರ ರಾವ್ ಕರಣಂ ಆಯ್ಕೆಯಾಗಿದ್ದಾರೆ.

ಈ ನೇಮಕಾತಿಯು ಸಂಡೂರು ತಾಲೂಕಿನ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಸಂದ ಗೌರವವಾಗಿದ್ದು, ನೌಕರರ ಸಮಸ್ಯೆಗಳ ಪರಿಹಾರ, ಸಂಘಟನಾ ಬಲವರ್ಧನೆ ಹಾಗೂ ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದು ಪ್ರೇರಣೆಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News