×
Ad

Ballari | ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ

Update: 2026-05-17 19:39 IST

ಬಳ್ಳಾರಿ / ಕಂಪ್ಲಿ : 2002-03ನೇ ಸಾಲಿನ 7ನೇ ತರಗತಿ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಶಿಸ್ತಿನಿಂದ ಆಚರಿಸಿದರು.

ತಾಲೂಕಿನ ರಾಮಸಾಗರ ಸಮೀಪದ ಪಂಪ ವಿದ್ಯಾಪೀಠದ ಹತ್ತಿರ ಇರುವ ತುಂಗಭದ್ರಾ ರಿವರ್ ವ್ಯೂ ರೆಸಾರ್ಟ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಹೂಮಳೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಶಿಕ್ಷಕ ವಿ. ರಾಮಚಂದ್ರರಾವ್, ಗುರುಗಳ ಮಾರ್ಗದರ್ಶನ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ತಮ್ಮ ಬಾಲ್ಯದ ದಿನಗಳು ಹಾಗೂ ಶಿಕ್ಷಕ ಜೀವನದ ನೆನಪುಗಳನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡ ಶಿಸ್ತು ಮತ್ತು ಸಮಯಪಾಲನೆಗೆ ಸಂತಸ ವ್ಯಕ್ತಪಡಿಸಿದರು.

“ಎಲ್ಲಾ ಪ್ರಶಸ್ತಿಗಳಿಗಿಂತ ಶಿಷ್ಯರಿಂದ ದೊರೆಯುವ ಈ ಸನ್ಮಾನ ನನಗೆ ಅತ್ಯಂತ ಅಮೂಲ್ಯ. ವರ್ಷಗಳು ಕಳೆದರೂ ವಿದ್ಯಾರ್ಥಿಗಳು ಎಂದಿಗೂ ಶಿಕ್ಷಕರಿಂದ ದೂರವಾಗುವುದಿಲ್ಲ. ಇಂತಹ ಭಾವನಾತ್ಮಕ ಕ್ಷಣಗಳು ನಮಗೆ ಸಂತೋಷ ತಂದಿವೆ” ಎಂದು ಹೇಳಿದರು.

ಶಿಕ್ಷಕ ಕೆ. ರಮೇಶ್ ಮಾತನಾಡಿ, “ನಿಮ್ಮಂತೆ ನಿಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು” ಎಂದು ಸಲಹೆ ನೀಡಿದರು. ವಿದ್ಯಾರ್ಥಿ ಜೀವನದ ಅನೇಕ ನೆನಪುಗಳನ್ನು ಮೆಲುಕು ಹಾಕಿದರು.

ಪದ್ಮ ಶಿಕ್ಷಕರು ಹಳೆಯ ವಿದ್ಯಾರ್ಥಿಗಳ ವಿಧೇಯತೆಯನ್ನು ಶ್ಲಾಘಿಸಿದರು. ಜಯಲಕ್ಷ್ಮಿ ಶಿಕ್ಷಕರು ಗುರು-ಶಿಷ್ಯರ ಸಂಬಂಧದ ಮಹತ್ವವನ್ನು ತಮ್ಮ ಜೀವನದ ಘಟನೆಯೊಂದರ ಮೂಲಕ ವಿವರಿಸಿದರು.

ಶಾಂತಾ ಶಿಕ್ಷಕರು ಮಾತನಾಡಿ, “ನಾವು ಕೇವಲ ಶಿಕ್ಷಕರಲ್ಲ, ನಿಮ್ಮ ಮಾರ್ಗದರ್ಶಕರು. ನಿಮ್ಮ ಪರಿಶ್ರಮದಿಂದ ಉತ್ತಮ ಜೀವನ ರೂಪಿಸಿಕೊಂಡಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಶಿಕ್ಷಕರೊಂದಿಗೆ ಕಳೆದ ದಿನಗಳ ಸವಿನೆನಪುಗಳನ್ನು ಸ್ಮರಿಸಿದರು. ಶಿಕ್ಷಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಕರ ಕುರಿತು ಭಾವನಾತ್ಮಕ ಮಾತುಗಳು, ಕವನಗಳು ಹಾಗೂ ನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕೆ. ಶ್ವೇತಾ, ಜೆ.ಬಿ. ವಿನಾಯಕ, ನವೀನ್, ಧನಪಾಲ್, ಕಿರಣ್, ಸಾಗರ್, ಎನ್. ಮಂಜುನಾಥ, ದೀಪಾಶ್ರೀ, ದೀಪಾ, ಕೆ.ಎಂ.ಜಿ. ರೇಖಾ, ಯು. ವನಜಾಕ್ಷಿ, ಕೆ. ತುಳಸಿ, ವೀರನಗೌಡ, ಎನ್. ಪ್ರೀತಿ, ಸಂತೋಷ, ಈ. ನಾಗರಾಜ, ಶ್ರುತಿ, ಈಶ್ವರಿ, ಸಿ.ಕೆ. ಮಂಜುನಾಥ, ಸಂದೀಪ್ ಬಿ., ಲಿಂಗರಾಜ್, ವಿನಾಯಕ, ಬಿ. ವೆಂಕಟೇಶ, ಎಸ್. ಉಮೇಶ್, ರೇಖಾ ಎಂ., ರಘು, ಮಂಜು ಎಂ. ಹಾಗೂ ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News