ಸಿರುಗುಪ್ಪ ತಾಲೂಕಿನದ್ಯಂತ ಧಾರಾಕಾರ ಮಳೆ : ರೈತರಲ್ಲಿ ಹರ್ಷ
ಬಳ್ಳಾರಿ/ಸಿರುಗುಪ್ಪ: ಬಳ್ಳಾರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಹರ್ಷ ಮೂಡಿಸಿದೆ.
ತೆಕ್ಕಲಕೋಟೆ, ಹಳೇಕೋಟೆ, ನಡೀವಿ, ಸಿರಿಗೇರಿ ಹಾಗೂ ಬುಡುಗುಪ್ಪ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ವರ್ಷಧಾರೆ ತಂಪಿನ ಅನುಭವ ನೀಡಿದೆ. ಬಿಸಿಲಿನ ಬೇಗೆಯಿಂದ ಕಾದಿದ್ದ ಭೂಮಿಗೆ ಮಳೆ ನೀರು ಜೀವಕಳೆ ತಂದಿದ್ದು, ಕೆಲವು ಹೊಲಗದ್ದೆಗಳಲ್ಲಿ ನೀರು ನಿಂತಿದೆ.
ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ಮಳೆಯ ಆಗಮನ ಹೊಸ ಭರವಸೆ ಮೂಡಿಸಿದೆ. ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾದರೆ ಬೆಳೆಗಳ ಬೆಳವಣಿಗೆಗೆ ನೆರವಾಗಲಿದೆ ಎಂಬ ಆಶಯ ರೈತರದ್ದಾಗಿದೆ.
ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ವಾತಾವರಣ ತಂಪಾಗಿದೆ. ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರಿಗೂ ಮಳೆ ತುಸು ನೆಮ್ಮದಿ ತಂದಿದೆ.