ಬಳ್ಳಾರಿ/ಕಂಪ್ಲಿ: ಸಮೀಪದ ಮಣ್ಣೂರು ಮತ್ತು ಎಂ. ಸೂಗೂರು ಗ್ರಾಮಗಳ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರಸ್ತಾಪಿಸಲಾಗಿರುವ 65 ಎಕರೆ ಮರಳು ಗಣಿಗಾರಿಕೆ ಬ್ಲಾಕ್‌ಗಳಿಗೆ ಪರಿಸರ ಅನುಮತಿ ನೀಡಬಾರದು ಎಂದು ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲಾಯಿತು.

ಡಾ. ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರವಿ ಮಣ್ಣೂರು ಅವರು ಅಪಾರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರಿಗೆ ಅನುಮತಿ ನೀಡಬಾರದು ಎಂದು ಲಿಖಿತ ಆಕ್ಷೇಪಣೆ ಸಲ್ಲಿಸಿದರು.

"ಗಣಿಗಾರಿಕೆಯಿಂದ ಕುಡಿಯುವ ನೀರಿನ ಬಾವಿಗಳು ಬತ್ತಲಿವೆ ಮತ್ತು ನೂರಾರು ಲಾರಿಗಳ ಸಂಚಾರದಿಂದ ವಿಪರೀತ ವಾಯು ಮಾಲಿನ್ಯ ಉಂಟಾಗಿ ಸಾರ್ವಜನಿಕರ ಆರೋಗ್ಯ ಹದಗೆಡಲಿದೆ. ಇದು ಪರಿಸರ ಹಾಗೂ ಪೆಸಾ (PESA) ಕಾಯ್ದೆಗಳ ಉಲ್ಲಂಘನೆಯಾಗಿದೆ" ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಇದನ್ನು ಕಡತಕ್ಕೆ ಸೇರಿಸುವುದಾಗಿ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor