×
Ad

Ballari | ʼನಿಮ್ಮ ಮನೆ ಮೇಲೆ ನಿಗಾ ಇಡಬೇಕೆಂದರೆ ನಮಗೆ ತಿಳಿಸಿʼ: ಜಿಲ್ಲಾ ಪೊಲೀಸ್ ಇಲಾಖೆ

Update: 2026-06-11 22:47 IST

ಎಸ್ಪಿ. ಡಾ. ಸುಮನ್ ಡಿ.ಪನ್ನೇಕರ್

ಬಳ್ಳಾರಿ: ಜಿಲ್ಲೆಯ ಹಳ್ಳಿ ಮತ್ತು ನಗರ ಪ್ರದೇಶದಲ್ಲಿನ ಜನತೆ ನೀವು ಮನೆಯಲ್ಲಿ ಯಾರು ಇಲ್ಲದಂತೆ ಬೇರೆ ಊರಿಗೆ ತರಳುವಾಗ ನಿಮ್ಮ ಮನೆ ಮೇಲೆ ನಿಗಾ ಇಡಬೇಕೆಂದರೆ ನಮಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ. ಡಾ. ಸುಮನ್ ಡಿ.ಪನ್ನೇಕರ್, ಮನೆಯಲ್ಲಿ ಯಾರೂ ಇಲ್ಲದೆ ಊರಿಗೆ ಹೋದಾಗ ಹೆಚ್ಚಾಗಿ ಕಳ್ಳತನ ನಡೆಯುತ್ತವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಜಾರಿಗೆ ತಂದಿದೆ.

ಯಾರಿಗಾದರೂ ತಮ್ಮ ಮನೆಯ ಮೇಲೆ ಪೊಲೀಸರು ನಿಗಾ ಇಡಬೇಕಾದ ಅಗತ್ಯತೆ ಇದ್ದರೆ ನಿಮ್ಮ ಮನೆಯ ವಿಳಾಸ, ಲೊಕೇಷನ್, ಮೊಬೈಲ್ ನಂಬರ್ ನ್ನು ಇಲಾಖೆಯ 9480803083 ಗೆ ಕಳುಹಿಸಿದರೆ ಅದನ್ನು ಸಂಬಂಧಿಸಿದ ಪ್ರದೇಶದ ಠಾಣೆಗಳಿಗೆ ಕಳಿಸಿ ನಿಮ್ಮ ಮನೆಯ ಮೇಲೆ ನಿಗಾ ಇಡಲಿದೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News