ಕಂಪ್ಲಿ: ಪ್ರತಿಭಾ ಪುರಸ್ಕಾರ ಸಮಾರಂಭ
ಬಳ್ಳಾರಿ / ಕಂಪ್ಲಿ: ಸಾಮಾಜಿಕ ಕಳಕಳಿಯೊಂದಿಗೆ ಯುವ ನಾಯಕ ಹೊಸಕೋಟೆ ಜಗದೀಶ ಅವರು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಹೇಳಿದರು.
ಸ್ಥಳೀಯ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ವೀರಶೈವ ಭವನದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಜನ್ಮದಿನದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು, ಸಂಸ್ಥೆಗಳು ಜಾತಿ, ಬೇಧಭಾವ ಇಲ್ಲದೇ, ಪ್ರತಿಯೊಬ್ಬರಿಗೂ ಶಿಕ್ಷಣದ ಜೊತೆಗೆ ಅನ್ನದಾಸೋಹವನ್ನು ಕಲ್ಪಿಸುತ್ತಾ ಬಂದಿವೆ. ಹೊಸಕೋಟೆ ಜಗದೀಶ ಅವರು ಸದಾ ಸಮಾಜದ ಏಳಿಗೆಗೆ ಶ್ರಮಿಸುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ನಿರಂತರವಾಗಿ ಹೊಂದಲಿ ಎಂದರು.
ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರದಿಂದ ದೊಡ್ಡತನ ಬೆಳೆಯುತ್ತದೆ. ಅಹಿಂಸೆ, ಸತ್ಯ, ದಾನವನ್ನು ಬೆಳೆಸಿಕೊಳ್ಳಬೇಕು. ವಿದ್ಯಾ ಮತ್ತು ಸಮಾಜಕ್ಕಾಗಿ ಹೊಸಕೋಟೆ ಜಗದೀಶ ಶ್ರಮಿಸುತ್ತಿದ್ದಾರೆ ಎಂದರು.
ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲ್ಯಾಣಚೌಕಿ ಮಠದ ಬಸವರಾಜ ಶಾಸ್ತ್ರ, ದಿವಾನ್ ಖಾನಾ ಹಜರತ್ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಪಾಸ್ಟರ್ ಪಾಲ್ ಪಂಪಾಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90% ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೌರ ಕಾರ್ಮಿಕರು, ರೈತ ದಂಪತಿ ಶಿವಲಿಂಗನಗೌಡ ದಂಪತಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪೇಕ್ಸ್ ಬ್ಯಾಂಕ್ ಸದಸ್ಯ ಪಿ.ಮೂಕಯ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಚಾನಾಳ್ ಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ನಾಗರಾಜ, ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಬಿ.ವಿ.ಗೌಡ, ಎಸ್.ಚಂದ್ರಶೇಖರಗೌಡ, ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಉಪಾಧ್ಯಕ್ಷ ಕರಿಬಸಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಮನೋಜ್‌ಗೌಡ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಮೆಟ್ರಿ ಹೊನ್ನಳ್ಳಿ ಶಿವಪುತ್ರಪ್ಪ, ವಿ.ವಿದ್ಯಾಧರ, ಜಿ.ಲಿಂಗನಗೌಡ, ಹೊನ್ನಳ್ಳಿ ಗಂಗಾಧರಗೌಡ, ಬರ‍್ಗಿ ಮಹೇಶಗೌಡ, ಅಳ್ಳಳ್ಳಿ ವಿರೇಶ, ಬಿ.ನಾರಾಯಣಪ್ಪ, ಶಾಂತಿಲಾಲ್, ಆನಂದರೆಡ್ಡಿ, ಅಮರೇಶಗೌಡ, ವಿರುಪಾಕ್ಷಯ್ಯಸ್ವಾಮಿ, ಶಂಭುಲಿಂಗ, ಹಂಪಾರೆಡ್ಡಿ, ಕೋರಿಬಸವರಾಜ, ಅಕ್ಕಮಹಾದೇವಿ, ಶಿಲ್ಪನಾಗರಾಜ ಸೇರಿದಂತೆ ವೀರಶೈವ ಸಮಾಜದವರು ಹಾಗೂ ವಿವಿಧ ಗಣ್ಯರು ಪಾಲ್ಗೊಂಡಿದ್ದರು.