×
Ad

ಬೆಳ್ತಂಗಡಿ SჄS ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಸಮಾಪ್ತಿ

Update: 2025-06-20 12:12 IST

ಬೆಳ್ತಂಗಡಿ:  SჄS ಬೆಳ್ತಂಗಡಿ ಝೋನ್ ಸಮಿತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಜೂನ್ 15 ರಂದು ಸಾಯಂಕಾಲ 6 ಗಂಟೆಗೆ ಸರಿಯಾಗಿ FM ಗಾರ್ಡನ್ ಗುರುವಾಯನಕೆರೆಯಲ್ಲಿ ನಡೆಯಿತು.

SჄS ಬೆಳ್ತಂಗಡಿ ಝೋನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಹಾದಿ ಮಲ್‌ಜಹ್ ದುಆ‌ ನೆರವೇರಿಸಿದರು. ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ಬಾಅಲವಿ ತಂಙಳ್ ಉಳ್ತೂರು ಅವರು ಉದ್ಘಾಟಿಸಿದರು.

 "ಸ್ಮಾರ್ಟ್ ಲೀಡರ್ಸ್" ಎಂಬ ವಿಷಯದಲ್ಲಿ ತ್ವಾಹಿರ್ ಸಖಾಫಿ ಮಂಜೇರಿ ಹಾಗೂ ಸಂಘಟನೆಯ ಜವಾಬ್ದಾರಿ ಎಂಬ ವಿಷಯದಲ್ಲಿ SჄS ಈಸ್ಟ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ಅವರು ತರಗತಿ ಮಂಡಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಝೋನ್ ಕೋಶಾಧಿಕಾರಿ ರಝಾಕ್ ಸಖಾಫಿ ಮಡಂತ್ಯಾರು ನೇತೃತ್ವದಲ್ಲಿ ಬದ್ರ್  ಮೌಲಿದ್ ಪಾರಾಯಣ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರುದ್ದೀನ್ ಅಲ್ ಹಾದಿ ತಂಙಳ್ ಮದನಿ ಪೊಮ್ಮಾಜೆ, SჄS ರಾಜ್ಯ ಕಾರ್ಯದರ್ಶಿ ಬಹು ಹಂಝ ಮದನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಪಟ್ಟೂರು, ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯಾಧ್ಯಕ್ಷ ಉಮರ್ GK ,   ದಕ್ಷಿಣ ಕನ್ನಡ ಜಿಲ್ಲೆ ವಕ್ಫ್ ಸಲಹಾ ಸದಸ್ಯ ಸಿದ್ದೀಕ್ JH, SSF ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಡಿವಿಷನ್ ಅಧ್ಯಕ್ಷ  ಇಸ್‌ಹಾಖ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಪದ್ದಂಡಡ್ಕ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಯುನಿಟ್ ,ಸರ್ಕಲ್ ಪದಾಧಿಕಾರಿಗಳು ಹಾಗೂ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರ ಸಹಿತ ಸುಮಾರು 300 ಕ್ಕೂ ಅಧಿಕ ನಾಯಕರು ಭಾಗವಹಿಸಿದ್ದರು.

  SჄS ಬೆಳ್ತಂಗಡಿ ಝೋನ್ ಪ್ರದಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿದರು. ಝೋನ್ ಸಂಘಟನಾ ಕಾರ್ಯದರ್ಶಿ ಜಮಾಲುದ್ದೀನ್ ಲತೀಫಿ ಲಾಡಿ ಧನ್ಯವಾದಗೈದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News