ಇಎಸ್‌ಐಎಸ್ ಆಯುಕ್ತ ಹುದ್ದೆಗೆ ಐಎಫ್‌ಎಸ್ ಅಧಿಕಾರಿ ನೇಮಕ ಆರೋಪ: ರಾಜ್ಯಪಾಲರಿಗೆ ದೂರು

Update: 2026-08-24 00:34 IST

ಬೆಂಗಳೂರು : ಕಾರ್ಮಿಕ ಇಲಾಖೆ ಅಧೀನದ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತ (ಇಎಸ್‌ಐಎಸ್) ಹುದ್ದೆಗೆ ನಿಯಮಬಾಹಿರವಾಗಿ ಐಎಫ್‌ಎಸ್ ಅಧಿಕಾರಿ ವೈ.ಕೆ.ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದ್ದು, ಈ ಸಂಬಂಧ ರಾಜ್ಯ ಸರಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಎಂಬವರು ದೂರು ಸಲ್ಲಿಕೆ ಮಾಡಿದ್ದು, ವೃಂದ ಮತ್ತು ನೇಮಕಾತಿ (ಸಿ ಮತ್ತು ಆರ್) ನಿಯಮ ಪ್ರಕಾರ ಇಎಸ್‌ಐಎಸ್ ಆಯುಕ್ತ ಹುದ್ದೆಯ ಸ್ಥಾನಮಾನವು ಹಿರಿಯ ಐಎಎಸ್ ಶ್ರೇಣಿಯ ಅಧಿಕಾರಿ ಇರಬೇಕು. ಈ ಕುರಿತು ಕಾರ್ಮಿಕ ಇಲಾಖೆ 2025ರಲ್ಲಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಆದರೆ, ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘಿಸಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈ.ಕೆ.ದಿನೇಶ್ ಕುಮಾರ್ ಇಎಸ್‌ಐಎಸ್ ಆಯುಕ್ತ ಹುದ್ದೆಗೆ ತಂದು ಕೂರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News