×
Ad

ಕೃಷ್ಣಾಪುರದಲ್ಲಿ ಮದ್ರಸ ಅಧ್ಯಾಪಕರ ಮೇಲಿನ ಹಲ್ಲೆ ಖಂಡನೀಯ: ಎಸ್.ಜೆ.ಎಂ ಬೆಂಗಳೂರು

Update: 2026-07-09 13:25 IST

ಬೆಂಗಳೂರು: ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ದ.ಕ ಜಿಲ್ಲೆಯ ಕೃಷ್ಣಾಪುರದಲ್ಲಿ ಮದ್ರಸ ಅಧ್ಯಾಪಕರ ಮೇಲೆ ನಡೆದಿರುವ ಹಲ್ಲೆ ಖಂಡನೀಯ ಎಂದು ಮದ್ರಸ ಅಧ್ಯಾಪಕರ ಒಕ್ಕೂಟ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ಬೆಂಗಳೂರು ಜಿಲ್ಲಾ ಸಮಿತಿ ಹೇಳಿದೆ.

ಅರಿವಿನ ಅಕ್ಷರ ಕ್ರಾಂತಿ ಬರೆಯುವ ಅಧ್ಯಾಪಕರು ಸಮಾಜದ ಸಂಪತ್ತಾಗಿದೆ.  ಶಿಸ್ತುಬದ್ಧವಾದ ತಲೆಮಾರನ್ನು ಕಟ್ಟಿ ಬೆಳೆಸಲು ಅವರು ಮಾಡುವ ಪ್ರಯತ್ನಗಳು ಅವರ್ಣನೀಯವಾಗಿದೆ. ಅಧ್ಯಾಪಕರು, ಪೋಷಕರು ಹಾಗೂ ಆಡಳಿತ ಮಂಡಳಿಗಳೆಲ್ಲರೂ ಪರಸ್ಪರ ಸಹಕಾರದಿಂದ ಕೈಜೋಡಿಸಿದರೆ ಮಾತ್ರ ಉತ್ತಮ ವಿದ್ಯಾರ್ಥಿ ಸಮಾಜವನ್ನು ಕಟ್ಟಲು ಸಾಧ್ಯ ಎಂದು ತಿಳಿಸಿದೆ.

ಅತ್ಯಂತ ವ್ಯವಸ್ಥಿತ ಹಾಗೂ ಕಾನೂನು ಬದ್ಧವಾಗಿ ಮದರಸಗಳನ್ನು ಮುನ್ನಡೆಸಲು ಅಧ್ಯಾಪಕರು ಮತ್ತು ಮ್ಯಾನೇಜ್ಮೆಂಟ್ ಗಳು ಮಾಡುವ ಪ್ರಯತ್ನಗಳು ಅಪಾರವಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸಲು ಬೇಕಾದ ಎಲ್ಲಾ ರೀತಿಯ ಮಾದರಿ ಟ್ರೈನಿಂಗ್ ಗಳು ಕೂಡ ಮದ್ರಸಾ ಅಧ್ಯಾಪಕರುಗಳಿಗೆ ನೀಡಲಾಗುತ್ತದೆ. ಮಕ್ಕಳ ಅಭಿವೃದ್ಧಿಯನ್ನು ಮನಗಂಡು ಉತ್ತಮ ರೀತಿಯಲ್ಲಿ ಕಲಿಸುವ ಗುರುಗಳಿಂದ ಏನಾದರೂ ಏರು ಪೇರುಗಳುಂಟಾದರೆ ಆ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿ ಪರಿಹಾರ ಹುಡುಕಬಹುದು. ವಿನಹ ಪೋಷಕರು ನೇರವಾಗಿ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳು ಅಧ್ಯಯನ ರಂಗದಲ್ಲಿ ಅತಿ ದೊಡ್ಡ ಆತಂಕವನ್ನು ಉಂಟು ಮಾಡುತ್ತದೆ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳು ಮಾಡುವ ಪ್ರಸಂಗ ಸೃಷ್ಟಿಯಾಗುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಸಮುದಾಯ ಜಾಗರೂಕರಾಗಲು ಎಸ್.ಜೆ.ಎಂ ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ನಡೆದ ಸಭೆಯಲ್ಲಿ ಎಸ್.ಜೆ.ಎಂ ರಾಜ್ಯ ನಾಯಕರಾಗಿರುವ ಇಬ್ರಾಹಿo ಸಖಾಫಿ, ತಾಜುದ್ದೀನ್ ಫಾಳಿಲಿ, ಜಿಲ್ಲಾಧ್ಯಕ್ಷ ಅಬ್ಬಾಸ್ ನಿಝಾಮಿ, ಕಾರ್ಯದರ್ಶಿ ಶಂಸುದ್ದೀನ್ ಅಝ್ಹರಿ, ಕೋಶಾಧಿಕಾರಿ ಸತ್ತಾರ್ ಮೌಲವಿ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News