ಸಾಂದರ್ಭಿಕ ಚಿತ್ರ | PC : Image by wirestock on Magnific

ಬೆಂಗಳೂರು : ಮಗಳನ್ನು ಪ್ರೀತಿ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ತಂದೆ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ‌ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಿರಣ್ ಕೊಲೆಯಾದ ಯುವಕ, ಆನಂದ್ ಎಂಬಾತ ಕೊಲೆ ಮಾಡಿದ ಆರೋಪಿ.

ತಮಿಳುನಾಡು ಮೂಲದ ಆನಂದ್ ಯಲಹಂಕದಲ್ಲಿ ವಾಸವಾಗಿದ್ದು, ಪಾಪ್ ಕಾರ್ನ್ ಸಂಬಂಧಿತ ಅಂಗಡಿಯಿಟ್ಟಿದ್ದ. ಇಲ್ಲಿ ಕೇರಳ ಮೂಲದ ಕಿರಣ್ ಎಂಬಾತನನ್ನು ಆನಂದ್ ಕೆಲಸಕ್ಕೆ ಇಟ್ಟುಕೊಂಡಿದ್ದ.

ಹೀಗಿರುವಾಗ ದಸರಾ ರಜೆಗೆ ಆನಂದ್ ಮಗಳು ಮೈಸೂರಿನಿಂದ ವಾಪಸ್ಸು ಬಂದಿದ್ದಳು. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ ಎನ್ನಲಾಗಿದೆ.

ಸೋಮವಾರ ಆನಂದ್ ಹಾಗೂ ಪತ್ನಿ ಸ್ವಂತ ಊರಿಗೆ ಹೋಗುವುದಾಗಿ ಹೊರಟಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ ಇಬ್ಬರು ವಾಪಸ್ಸಾಗಿದ್ದಾರೆ. ಈ ವೇಳೆ ಮಗಳು ಹಾಗೂ ಕಿರಣ್ ಒಟ್ಟಿಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಕೋಪಗೊಂಡ ಆನಂದ್ ಕಿರಣ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸೋಮವಾರದಿಂದ ನಿನ್ನೆ ಮಧ್ಯಾಹ್ನದವರೆಗೂ ಮನೆಯಲ್ಲೆ ಇಟ್ಟುಕೊಂಡು ಕಿರಣ್ ಮೇಲೆ ಹಲ್ಲೆ ಮಾಡಿರುವ ಆನಂದ್. ನಿನ್ನೆ ಮಧ್ಯಾಹ್ನ ನೋವು ತಾಳಲಾರದೆ ಕಿರಣ್ ಒದ್ದಾಡಲು ಶುರು ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆರೋಪಿ ಆನಂದ್ ಅಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಯವರು ನೀಡಿದ ಮಾಹಿತಿ ಅಧರಿಸಿ ತನಿಖೆ ಮಾಡಿದ ಯಲಹಂಕ ಪೊಲೀಸರಿಗೆ ಅಸಲಿ ವಿಷಯ ಗೊತ್ತಾಗಿದ್ದು, ಸದ್ಯ ಆನಂದ್ ನನ್ನು ಬಂಧನ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor