ಸಾಂದರ್ಭಿಕ ಚಿತ್ರ | PC : Image by kjpargeter on Magnific

ಬೆಂಗಳೂರು : ಪ್ರಿಯತಮೆಗೆ ಬೇರೆ ಯುವಕನ ಜೊತೆ ಸಂಬಂಧ ಎಂದು ಅನುಮಾನಿಸಿ ಪ್ರಿಯತಮೆಯನ್ನು ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಲಾಡ್ಜ್ ವೊಂದರಲ್ಲಿ ನಡೆದಿದೆ.

ಗಂಗಾ ಕೊಲೆಯಾದ ಯುವತಿ, ಗೋಕುಲ್ ಕೃಷ್ಣ ಕೊಲೆ ಮಾಡಿದ ಆರೋಪಿ.

ಗಂಗಾ ಹಾಗೂ ಗೋಕುಲ್ ಕೃಷ್ಣ ಮೂಲತಃ ಕೇರಳ ಮೂಲದವರು. ನೆಲಮಂಗಲದ ನರ್ಸಿಂಗ್ ಕಾಲೇಜು ಒಂದರಲ್ಲಿ ಓದುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು. ಆದರೆ ಇಬ್ಬರ ನಡುವೆ ಇತ್ತೀಚಿಗೆ ಮನಸ್ತಾಪ ಹೆಚ್ಚಾಗಿತ್ತು ಎನ್ನಲಾಗಿದೆ. ನಿನ್ನೆ ಕಾಟನ್ ಪೇಟೆಯ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ಹೋಗಿದ್ದಾರೆ.

ಈ ವೇಳೆ ಮೊದಲೇ ಚಾಕು ಖರೀದಿಸಿ ಬಂದಿದ್ದ ಗೋಕುಲ್ ಇಂದು ಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾಗರಾಜ್ ಅಪ್ಪಸಂದ್ರ/ವಾರ್ತಾಭಾರತಿ

ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರು

ನಾಗರಾಜ್ ಅಪ್ಪಸಂದ್ರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ‘ವಾರ್ತಾಭಾರತಿ’ ಡಿಜಿಟಲ್ ನಲ್ಲಿ ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.