ಡಾ.ರೊನಾಲ್ಡ್ ಕೊಲಾಸೊ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ ರಾಜ್ಯಪಾಲ ಅಬ್ದುಲ್ ನಝೀರ್
ಬೆಂಗಳೂರು: ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್ ಅವರು ಸೋಮವಾರ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ನವೆಂಬರ್ 29 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ರಾಜ್ಯಪಾಲರ ಭೇಟಿಯ ವೇಳೆ ರೊನಾಲ್ಡ್ ಕೊಲಾಸೊ ಅವರ ಪತ್ನಿ ಜೀನ್ ಕೊಲಾಸೊ, ಪುತ್ರ ನೈಜೆಲ್ ಕೊಲಾಸೊ ಹಾಗು ಪತ್ನಿ ನಿಕಿತಾ ಕೊಲಾಸೊ, ಇನ್ನೋರ್ವ ಪುತ್ರ ರಾಂಡಲ್ ಕೊಲಾಸೊ ಹಾಗು ಪತ್ನಿ ಮುರಿಯಲ್ ಕೊಲಾಸೊ, ಮಂಗಳೂರಿನ ಡೆನಿಸ್ ಡಿಸಿಲ್ವ ಹಾಗು ಗ್ರೆಟ್ಟಾ ಡಿಸಿಲ್ವ ಅವರು ಉಪಸ್ಥಿತರಿದ್ದರು.
ಆಲಿಸ್ ಕೊಲಾಸೊ ಅವರ ಅಂತಿಮ ಸಂಸ್ಕಾರ ಮಂಗಳವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆ ಬಳಿ ಇರುವ ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ನಡೆಯಲಿದೆ. ಹತ್ತು ಗಂಟೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು.