×
Ad

ಬೆಂಗಳೂರು: ಕಿರುಕುಳ ನೀಡುತ್ತಿದ್ದ ಮಗನ ಕೈ-ಕಾಲು ಕಟ್ಟಿ ಬೆಂಕಿ ಹಚ್ಚಿದ ತಂದೆ

Update: 2023-07-01 19:37 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.1: ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಕಿರುಕುಳ ಕೊಡುತ್ತಿದ್ದ ಮಗನನ್ನು ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪುತ್ರ ಆದರ್ಶ್(28) ಮೃತ ವ್ಯಕ್ತಿಯಾಗಿದ್ದು, ಆದರ್ಶ್ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿದಾಗ ಕೊಡಲಿಲ್ಲವೆಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಮದ್ಯದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ಮಗನ ರಂಪಾಟದಿಂದ ಬೇಸತ್ತಿದ್ದ ತಂದೆ ಜಯರಾಮಯ್ಯ ಜು.1ರ ಬೆಳಗಿನ ಜಾವದಲ್ಲಿ ಮಗ ಆದರ್ಶ್‍ನ ಕೈಕಾಲು ಕಟ್ಟಿಹಾಕಿ, ಮೈ ಮೇಲೆ ಪೆಟ್ರೋಲ್ ಅನ್ನು ಸುರಿದು ಬೆಂಕಿ ಹಚ್ಚಿದ್ದಾನೆ.

ಇನ್ನು ಈ ಕುರಿತು ದೊಡ್ಡಬೆಳವಂಗಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News