×
Ad

ಎಸ್‍ಐಆರ್ : ಬೂತ್ ಮಟ್ಟದ ಅಧಿಕಾರಿಗಳಿಗೆ ‘ಕರ್ತವ್ಯ ಆಪ್’ ನಲ್ಲಿ ಹಾಜರಾತಿಗೆ ವಿನಾಯಿತಿ

Update: 2026-07-01 23:32 IST

ಸಾಂದರ್ಭಿಕ ಚಿತ್ರ | PC : PTI


ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕೆಲಸದ ಅನುಕೂಲಕ್ಕಾಗಿ ಚುನಾವಣಾ ಆಯೋಗವು ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ.

ಕ್ಷೇತ್ರ ಮಟ್ಟದಲ್ಲಿ (ಕಚೇರಿಯ ಹೊರಗೆ) ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ‘ಕರ್ತವ್ಯ' ಆಪ್‍ನಲ್ಲಿನ ಸಾಮಾನ್ಯ ಹಾಜರಾತಿ ದಾಖಲಾತಿಯಿಂದ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿಕೆಯ ಮೇರೆಗೆ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಸರಕಾರದ ಅನುಮೋದನೆಯ ಮೇರೆಗೆ, ಕಚೇರಿಯ ಹೊರಗೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ‘ಕರ್ತವ್ಯ' ಆಪ್‍ನಲ್ಲಿ ‘‘On Other Duty' ಆಯ್ಕೆಯನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. Link:https://youtu.be/SVrDu4Ecsw?t=96&si=8RnLOk1ErP8byk-E  ವಿಡಿಯೋ ಲಿಂಕ್ ಅನ್ನು ಉಪಯೋಗಿಸಿಕೊಂಡು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕ್ಷೇತ್ರಮಟ್ಟದ ಕರ್ತವ್ಯದಲ್ಲಿದ್ದಾಗ, ‘ಕರ್ತವ್ಯ' ಆಪ್ ಬಳಸಿಕೊಂಡು ತಮ್ಮ ಹಾಜರಾತಿಯನ್ನು 'OOD' ಎಂದು ದಾಖಲಿಸುವಂತೆ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸೂಚಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News