ಭೀಮ್ ಆರ್ಮಿ ಹುಮನಾಬಾದ್ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಹುಮನಾಬಾದ್: ತಾಲೂಕಿನ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ಶನಿವಾರ ನಡೆದ ವಿಶೇಷ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹುಮನಾಬಾದ್ ತಾಲೂಕು ಘಟಕದ ಅಧ್ಯಕ್ಷರಾಗಿ ಅನಿಲ್ ದೊಡ್ಡಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಮನೋಜ್ ಕುಮಾರ್ ಜಾನವಿ ಹಾಗೂ ಉಪಾಧ್ಯಕ್ಷರಾಗಿ ಶೇಕ್ ಫಿರ್ದೋಸ್ ಅವರನ್ನು ನೇಮಿಸಲಾಯಿತು.
ಸಂಘಟನೆಯ ಅಲ್ಪಸಂಖ್ಯಾತ ಘಟಕಕ್ಕೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷರಾಗಿ ಎಂ.ಡಿ. ಬಾಬಾ ಪಟೇಲ್ ಹಾಗೂ ಉಪಾಧ್ಯಕ್ಷರಾಗಿ ತಯಾಬ್ ನಂದನ್ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಇದೇ ವೇಳೆ ಜಲಸಂಗಿ ಗ್ರಾಮ ಶಾಖೆಯ ನೂತನ ಅಧ್ಯಕ್ಷರಾಗಿ ರಾಹುಲ್ ಮೇಟಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆಕಾಶ್ ವಿ.ಆರ್.ಕೆ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ರಜನಿಕಾಂತ್ ನಿಜಾಂಪುರ್, ಜಿಲ್ಲಾಧ್ಯಕ್ಷ ಅಂಬರೀಷ್ ಕುದುರೆ ಹಾಗೂ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಖಿಲೇಶ್ ಸಾಗರ್, ಸುನಿಲ್ ಹಣಕೊಣಿ, ಸೂರ್ಯಕಾಂತ್ ದೊಡ್ಡಿ ಹಾಗೂ ಉಮೇಶ್ ಶಿಂದೆ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.