×
Ad

ಬೀದರ್ | ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿ ಅಧಿಕಾರೇತರ ಸದಸ್ಯರಾಗಿ ನೇಮಕ

Update: 2025-11-24 16:29 IST

ಬೀದರ್ : ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ.

ಬಸವಕಲ್ಯಾಣ ತಾಲೂಕಿನ ಬಾಗ ಹಿಪ್ಪರಗಾದ ನಿವಾಸಿ ಅನ್ನಪೂರ್ಣಬಾಯಿ, ಪರತಾಪುರ್ ನಿವಾಸಿ ವಿಶ್ವನಾಥ್ (ಪಿಂಟು) ಕಾಂಬಳೆ, ಕೊಹಿನೂರ್ ನ ಆನಂದ್ ಪಾಟೀಲ್, ಸೈಯದ್ ನವಾಜ ಕಾಜ್ಮಿ, ಮಂಠಾಳ ನಿವಾಸಿ ಶಿವಕುಮಾ‌ರ್ ಹಾಗೂ ಸಂದೀಪ್ ಬುಯೇ ಅವರು ನಾಮ ನಿರ್ದೇಶನಗೊಂಡಿದ್ದಾರೆ.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಆರ್.ಮಧುಸೂದನ್ ಅವರು ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News