×
Ad

ಬೀದರ್ | ಈಡಿ ಇಲಾಖೆಯ ಹೆಸರು ಹೇಳಿ 12 ಲಕ್ಷ ರೂ. ವಂಚನೆ ಆರೋಪ : ಪ್ರಕರಣ ದಾಖಲು

Update: 2025-10-17 21:12 IST

ಬೀದರ್ : ಮುಂಬೈಯ ಈಡಿ ಇಲಾಖೆಯಿಂದ ಕರೆ ಮಾಡಿದ್ದೇವೆ ಎಂದು ಹೇಳಿ ವಾಟ್ಸಪ್ ಮೂಲಕ ಕರೆ ಮಾಡಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ನಿವೃತ್ತ ಕೇಂದ್ರ ಸರಕಾರಿ ನೌಕರರೊಬ್ಬರು ಆರೋಪಿಸಿದ್ದು, ಈ ಕುರಿತು ಗುರುವಾರ ಪ್ರಕರಣ ದಾಖಲಾಗಿದೆ.

ನಗರದ ಆನಂದನಗರದ ನಿವಾಸಿ ಹಾಗೂ ನಿವೃತ್ತ ಕೇಂದ್ರ ಸರಕಾರಿ ನೌಕರ ಬಳಿರಾಮ್ ಕಾಂಬಳೆ ವಂಚನೆಗೆ ಒಳಗಾದವರು.

ಈಡಿ ಇಲಾಖೆಯಿಂದ ಕರೆ ಮಾಡುತಿದ್ದೇವೆ ಎಂದು ಹೇಳಿ, ನಿಮ್ಮ ಹೆಸರಿನಲ್ಲಿ ಖಾತೆ ಇದ್ದು 4 ಕೋಟಿ 70 ಲಕ್ಷ ರೂ. ವ್ಯವಹಾರ ಆಗಿದೆ. ಆ ಹಣವು ಮನಿಲಾಂಡ್ರಿಂಗ್ ಸಂಬಂಧಿಸಿದ್ದಾಗಿದೆ. ಖಾತೆ ಪರಿಶೀಲನೆಗೊಸ್ಕರ ಹಣ ನೀಡಬೇಕು ಎಂದಾಗ ನಾನು ಅವರ ಖಾತೆಗೆ 12 ಲಕ್ಷ ರೂ. ಕಳುಹಿಸಿದ್ದೇನೆ. ನಂತರ ನನಗೆ ಮೋಸ ಮಾಡಲಾಗಿದೆ ಎಂದು ಸಂಶಯ ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News