ಬೀದರ್| ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶದ ಕರಪತ್ರ ಬಿಡುಗಡೆ
ಬೀದರ್ : ಡಾ. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಡಿ.6 ರಂದು ನಡೆಯುವ 'ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ' ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಇತರರು ಡಿ. 6 ರಂದು ಡಾ. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣದ ಅಂಗವಾಗಿ ನಡೆಯುವ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿದರು.
ಅಂಬೇಡ್ಕರ್ ಅವರು ಬುದ್ಧ ಭಾರತ ನಿರ್ಮಾಣ ಮಾಡುವುದಕ್ಕಾಗಿ 1956ರಲ್ಲಿ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದರು. ಅವರು ಕಂಡ ಸಮಾನತೆಯ ಕನಸು ನನಸು ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ. ಹಾಗಾಗಿ ಡಿ.6ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರಮೇಶ್ ಡಾಕುಳಗಿ, ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಗೌರವಾಧ್ಯಕ್ಷ ಪ್ರಕಾಶ್ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಿಲಿಕಟ್ಟಿ, ಕಾರ್ಯದರ್ಶಿ ಅರುಣ್ ಪಟೇಲ್, ಸಲಹೆಗಾರರಾದ ಅನೀಲಕುಮಾರ್ ಬೆಲ್ದಾರ್, ಡಾ.ಕಾಶಿನಾಥ್ ಚೆಲ್ವಾ, ಬಾಬುರಾವ್ ಪಾಸ್ವಾನ್, ಕಲ್ಯಾಣರಾವ್ ಭೋಸ್ಲೆ, ಶ್ರೀಪತಿರಾವ್ ದೀನೆ, ದಶರಥ್ ಗುರು, ಬಕ್ಕಪ್ಪಾ ದಂಡಿನ್, ಪ್ರಮುಖರಾದ ಬಸವರಾಜ್ ಮಾಳಗೆ, ಸಮಿತಿಯ ಉಪಾಧ್ಯಕ್ಷ ರಂಜಿತಾ ಜೈನೋರ್, ಸುಧಾಮಣಿ ಗುಪ್ತಾ, ಲುಂಬಿಣಿ, ಸಂಗೀತಾ ಕಾಂಬಳೆ, ರಾಜಕುಮಾರ್ ಬನ್ನೆರ್, ಶಾಲಿವಾನ್ ಬಡಿಗೆರ್, ಬಾಬುರಾವ್ ಮಿಠಾರೆ, ಸುನೀಲ್ ಸಂಗಮ್, ಸಂಜುಕುಮಾರ್ ಮೇತ್ರೆ, ನರಸಿಂಗ್ ಸಾಮ್ರಾಟ, ಸಂದೀಪ್ ಕಾಂಟೆ, ಗೌತಮ್ ಭೊಸ್ಲೆ, ಗೌತಮ್ ಪ್ರಸಾದ್, ಪ್ರಕಾಶ್ ರಾವಣ, ಪುಟುರಾಜ್ ದಿನೆ, ಸತೀಶ್ ಲಕ್ಕಿ, ತುಕಾರಾಮ್ ಲಾಡಕರ್, ಸುರೇಶ್ ಜೊಜನಾಕರ್ ಹಾಗೂ ಅಂಬೇಡ್ಕರ್ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.