ಬೀದರ್ | ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಸುಧಾರಣೆ, ಆಡಳಿತಾತ್ಮಕ ಸರಳಿಕರಣಗೊಳಿಸಲು ಮನವಿ
ಬೀದರ್ : ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಸುಧಾರಣೆ ಹಾಗೂ ಆಡಳಿತಾತ್ಮಕ ಸರಳಿಕರಣಗೊಳಿಸಲು ಫೆಡರೇಶನ್ ಆಫ್ ಮೈನಾರಿಟಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (FMEI) ವತಿಯಿಂದ ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಫೆಡರೇಶನ್ ಆಫ್ ಮೈನಾರಿಟಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (FMEI) ನ ಕಾರ್ಯದರ್ಶಿ ಹಾರುನ್ ಬಾಷಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಂಸ್ಥೆಗಳ ಪ್ರಮಾಣಪತ್ರ ಸರಳಿಕರಣಗೊಳಿಸಬೇಕು. ವಿದ್ಯಾರ್ಥಿವೇತನ ನಿಧಿ ಹೆಚ್ಚಳ ಮಾಡಬೇಕು. ಪ್ರಿಮ್ಯಾಟ್ರಿಕ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನ ಹೆಚ್ಚಿಸಬೇಕು. ಮೂಲಭೂತ ಸೌಕರ್ಯ ಬೆಂಬಲಕ್ಕೆ ಸರ್ಕಾರ ಭೂಮಿ ಮತ್ತು ಅನುದಾನ ನೀಡಿ ಸಹಕರಿಸಬೇಕು. ಮೌಲ್ಯ ಮತ್ತು ಜೀವನ ಕೌಶಲ್ಯ ಶಿಕ್ಷಣ ನೀಡಬೇಕು. ಉದ್ಯೋಗಿ ಅಲ್ಪಸಂಖ್ಯಾತ ಮಹಿಳೆಯರಿಗೆ ಮಹಿಳಾ ವಸತಿ ಗೃಹಗಳನ್ನು ನಿರ್ಮಿಸಬೇಕು.
ಆನ್-ಲೈನ್ ಅರ್ಜಿಗಳ ಮೂಲಕ ಮದರಸಾಗಳಿಗೆ ನೇರ ಅನುದಾನ ನೀಡಬೇಕು. ಅಲ್ಪಸಂಖ್ಯಾತರ ಯುವ ಸಬಲೀಕರಣಗೋಸ್ಕರ ಉದ್ಯೋಗ ಸೃಷ್ಟಿಸುವುದಕ್ಕೆ ಇದ್ದ ಅನುದಾನವನ್ನು ದ್ವಿಗುಣಗೋಳಿಸಬೇಕು. ಆಡಳಿತಾತ್ಮಕ ಸರಳಿಕರಣಗೊಳಿಸಬೇಕು. 1995ರ ನಂತರ ಸ್ಥಾಪಿಸಿದ ಉರ್ದು ಮತ್ತು ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಅನುದಾನಿತ ಉರ್ದು ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ನೋಂದಾಯಿತ ಸಂಸ್ಥೆಗಳಲ್ಲಿ 2011ರಲ್ಲಿ ನೋಂದಣಿಯಾದ ಫೆಡರೇಶನ್ ಆಫ್ ಮೈನಾರಿಟಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (FMEI) ಇದು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ವೃದ್ಧಿಸುವ ಕಾರ್ಯದಲ್ಲಿ ತೊಡಗಿದೆ. ಇದರಲ್ಲಿ 200ಕ್ಕೂ ಹೆಚ್ಚು ಸದಸ್ಯ ಶಿಕ್ಷಣ ಸಂಸ್ಥೆಗಳು ಹಾಗೂ 1 ಸಾವಿರ ಕ್ಕಿಂತಲೂ ಹೆಚ್ಚಿನ ಶಾಲೆಗಳು ಇವೆ. 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ಸೇವೆ ಸಲ್ಲಿಸುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಅವರು ಮನವಿ ಪತ್ರ ಸ್ವೀಕರಿಸಿ, ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಫೆಡರೇಶನ್ ಆಫ್ ಮೈನಾರಿಟಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (FMEI) ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸಿಫುದ್ದೀನ್, ಸದಸ್ಯರಾದ ಇಕ್ಬಾಲ್ ಅಹ್ಮದ್, ಬಷಾರತ್ ಅಹ್ಮದ್ ಅನ್ಸಾರಿ, ರಿಯಾಜ್ ಅಹ್ಮದ್ ರೋಣ, ಡಾ. ನಸೀಮ್ ಅಹ್ಮದ್, ಆದಿ ಉಲ್ ಹಸನ್, ಅಶ್ರಫ್ ಉಸ್ತಾದ್ ಹಾಗೂ ಮುಹಮ್ಮದ ಇಸ್ಮಾಯಿಲ್ ಇದ್ದರು.