×
Ad

ಬೀದರ್ | ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನಕ್ಕೆ ಪದಾಧಿಕಾರಿಗಳ ನೇಮಕ : ಮಹೇಶ್ ಗೋರನಾಳಕರ್

Update: 2025-11-07 19:46 IST

ಬೀದರ್ : ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೀದರ್ ಜಿಲ್ಲಾದ್ಯಂತ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನ ಅನುಷ್ಠಾನಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಸಂಚಾಲಕ ಮತ್ತು ಬುದ್ಧ ಬೆಳಕು ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಗೋರನಾಳಕರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಡಾ.ಅಂಬೇಡ್ಕರ್ ಅವರು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜಾತಿಯ,‌ ಧರ್ಮದ ಮಹಿಳೆಯರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ಮತ್ತು ಎಲ್ಲಾ ಕ್ಷೇತ್ರದಲ್ಲಿ ಪ್ರಬುದ್ಧ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ತುಂಬಾ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯ ನಾಗರೀಕನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಅವರು ಪಟ್ಟ ಶ್ರಮದ ಬಗ್ಗೆ ಬೀದರ್ ಜಿಲ್ಲಾದ್ಯಂತ ಅರಿವು ಮತ್ತು ಜಾಗೃತಿ ಮೂಡಿಸಲು ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಈ ಅಭಿಯಾನದ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಭಿಯಾನ ಅನುಷ್ಠಾನದ ಗೌರವಾಧ್ಯಕ್ಷರಾಗಿ ಮಾರುತಿ ಬೌಧ್ದೆ, ಅಧ್ಯಕ್ಷರಾಗಿ ಡಾ.ಕಾಶಿನಾಥ್ ಚೆಲ್ವಾ, ಕಾರ್ಯಾಧ್ಯಕ್ಷರಾಗಿ ಶಿವಶರಣಪ್ಪಾ ಹುಗ್ಗಿ ಪಾಟೀಲ್, ಬಾಬು ಟೈಗರ್, ಉಪಾಧ್ಯಕ್ಷರಾಗಿ ಓಂಪ್ರಕಾಶ್ ರೋಟ್ಟೆ, ಜಗದೀಶ್ವರ್ ಬಿರಾದಾರ್, ಗಾಲಿಬ್ ಹಾಷ್ಮಿ, ಖಲಿಲಮಿಯ್ಯ ಗುತ್ತೆದಾರ್, ಪ್ರಧಾನ ಕಾರ್ಯದರ್ಶಿಯಾಗಿ ವಿನಯಕುಮಾರ್ ಮಾಳಗೆ, ವಿನೋದ್ ರತ್ನಾಕರ್ ಕಾರ್ಯದರ್ಶಿಗಳಾಗಿ ಕಂಟೇಪ್ಪಾ ಪೂಜಾರಿ, ರಾಜಕುಮಾರ್ ವಾಘಮಾರೆ, ಸಂತೋಷ್ ಪಡಸಾಲೆ, ರಮೇಶ ಗೌಡ ಸಾಗರ್, ಸಹ ಕಾರ್ಯದರ್ಶಿಯಾಗಿ ಶ್ರೀಧರ್ ಸೋಮನೋರ್, ಧರ್ಮಾನಂದ್ ಶಿಂದೆ, ರಾಜಕುಮಾರ್ ಪ್ರಸಾದೆ, ಲೊಕೇಶ್ ಕಾಂಬಳೆ, ಸಿದ್ದಾರ್ಥ್ ನಾಟೆಕರ್, ದೀಪಕ್ ದೋಡ್ಡಿ, ಕೋಶಾಧ್ಯಕ್ಷರಾಗಿ ದಶರಥ ಗುರು, ಸಲಹೆಗಾರರಾಗಿ ಶ್ರೀಕಾಂತ್ ಸ್ವಾಮಿ, ಬಾಬುರಾವ್ ಹೊನ್ನಾ, ವಿಠಲದಾಸ್ ಪ್ಯಾಗೆ, ರಾಜಕುಮಾರ್ ಮೂಲಭಾರತಿ, ರಾಜಪ್ಪಾ ಗೂನ್ನಳ್ಳಿಕರ್, ರಾಜಕುಮಾರ್ ಬನ್ನೆರ್ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಯುವ ಘಟಕ ಅಧ್ಯಕ್ಷರಾಗಿ ಪ್ರಕಾಶ್ ರಾವಣ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆಯಾಗಿ ರಾಜೇಶ್ವರಿ ಮೋರೆ, ಜಿಲ್ಲಾ ವಿಧ್ಯಾರ್ಥಿ ಘಟಕ ಅಧ್ಯಕ್ಷರಾಗಿ ಹರ್ಷಿತ್ ದಾಂಡೆಕರ್, ಜಿಲ್ಲಾ ಸಾಂಸ್ಕೃತಿಕ ಘಟಕ ಅಧ್ಯಕ್ಷರಾಗಿ ಸೂರ್ಯಕಾಂತ್ ಬಡಿಗೇರ್ ಅವರನ್ನು ನೇಮಿಸಲಾಗಿದೆ.

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು :

ಪುನಿತಾ ಗಾಯಕವಾಡ್, ಇಂದುಮತಿ ಸಾಗರ್, ಸಂಗೀತಾ ಕಾಂಬಳೆ, ಅರುಣ ಪಟೇಲ್, ಅಮರ್ ಅಲ್ಲಾಪೂರ್, ಪ್ರಕಾಶ್ ನಾಗರಕಟ್ಟಿ, ರಮೇಶ್ ಮಾಲೆ, ಗೌತಮ್ ಸಿ.ಎಂ., ರವಿ ಕೋಟೆರ್, ಶರಣು ಫುಲೆ, ಕೃಷ್ಣ ಭೂತಾಳೆ, ಅವಿನಾಶ್ ಮಂದಕನಳ್ಳಿ, ರಾಜಶೇಖರ್ ಕುಂಚೆ, ಪ್ರಕಾಶ್ ಗುಪ್ತಾ, ಗೌತಮ್ ಮುತಂಗಿಕರ್, ಕುಶಾಲ್ ನಾಟೇಕರ್ ಇವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News