ಬೀದರ್| ಬಸವಕಲ್ಯಾಣ ತಾಲೂಕು ಪಂಚಾಯತ್ ಕೆಡಿಪಿ ಸಭೆ ಪೂರ್ಣಗೊಳಿಸಲು ಮನವಿ
ಬೀದರ್ : ನ. 28ರಂದು ಬಸವಕಲ್ಯಾಣ ತಾಲೂಕು ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಯು ಅಪೂರ್ಣವಾಗಿ ಕೊನೆಗೊಂಡಿದೆ. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಪಡಿಸಿ ಕೆಡಿಪಿ ಸಭೆಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನ.28ರಂದು ಬಸವಕಲ್ಯಾಣ ತಾಲೂಕು ಪಂಚಾಯತ್ ನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕಿನ 45 ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಬೇಕಿತ್ತು. ಆದರೆ 45 ಇಲಾಖೆಗಳ ಪೈಕಿ ಕೇವಲ 7 ಇಲಾಖೆಗಳ ಪ್ರಗತಿ ಪರಿಶಿಲನೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೆಡಿಪಿ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದೂಡಿದ ಕಾರಣ, ಇನ್ನುಳಿದ ಇಲಾಖೆಗಳ ಪ್ರಗತಿ ಪರಿಶಿಲನೆ ಬಗ್ಗೆ ಚರ್ಚೆ ಮಾಡಲಿಲ್ಲ. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಪಡಿಸಿ ಇನ್ನುಳಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಿದ್ದರಾಮ್ ಕಾಮಣ್ಣ, ಆನಂದ್ ಪಾಟೀಲ್, ವಿಶ್ವನಾಥ್ ಕಾಂಬಳೆ, ಶಿವಕುಮಾರ್ ಶಟಕಾರ್, ಅನ್ನಪೂರ್ಣಬಾಯಿ, ಸೈಯ್ಯದ್ ನವಾಜ್ ಖಾಜಿ ಹಾಗೂ ಸಂದೀಪ್ ಬುಯೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.