ಬೀದರ್ | ಶಾಲಾ ವಾಹನ ಹರಿದು ಬಾಲಕ ಮೃತ್ಯು
Update: 2025-10-31 17:44 IST
ಸಾಂದರ್ಭಿಕ ಚಿತ್ರ
ಬೀದರ್ : ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಶಾಲಾ ವಾಹನ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಚೌಕಿವಾಡಿ ಗ್ರಾಮದಲ್ಲಿ ಗುರುವಾರ ಸಾಯಂಕಾಲ ನಡೆದಿದೆ.
ಶ್ರೀಹರಿ ಪಾಟೀಲ್ (3) ಘಟನೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ.
ಬಸವಕಲ್ಯಾಣ ನಗರದ ಖಾಸಗಿ ಶಾಲೆಗೆ ಸೇರಿದ ಶಾಲಾ ವಾಹನ(ಮಿನಿ ಬಸ್) ಬಾಲಕನ ಮೈ ಮೇಲೆ ಹರಿದಿದ್ದು, ಪರಿಣಾಮವಾಗಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಾಹನ ಚಾಲಕನ ಅಜಾಗರುಕತೆಯೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.