×
Ad

ಬೀದರ್ | ಎರಡು ಬಸ್‌ಗಳ ನಡುವೆ ಢಿಕ್ಕಿ : ಇಬ್ಬರಿಗೆ ಗಾಯ

Update: 2024-11-16 19:09 IST

ಬೀದರ್ : ಖಾಸಗಿ ಬಸ್ ಮತ್ತು ಕರ್ನಾಟಕ ಸಾರಿಗೆ ಬಸ್ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಹುಮನಾಬಾದ್ ತಾಲ್ಲೂಕಿನ ಚಿಟಗುಪ್ಪ ರಸ್ತೆ ಮಾರ್ಗದಲ್ಲಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಹುಮನಾಬಾದ್ ನಿಂದ ಹುಡಗಿ ಹತ್ತಿರ ನಿಂತಿರುವ ವೇಳೆ ಧನುಂಜಯ ಹೆಸರಿನ ಖಾಸಗಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಕ್ಲೀನರ್ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.

ಗಾಯಗೊಂಡ ಇಬ್ಬರನ್ನು ಹುಮನಾಬಾದ್ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಹುಮನಾಬಾದ್ ಟ್ರಾಫೀಕ್ ಪೊಲೀಸ್ ಅಧಿಕಾರಿ ಬಸವಲಿಂಗಪ್ಪ ಕೊಡಿಹಾಳ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News