×
Ad

ಬೀದರ್ | ವಿವಿಧ ಕ್ಷೇತ್ರಗಳ17 ಸಾಧಕರಿಗೆ ʼಜಿಲ್ಲಾ ಕನ್ನಡ ರಾಜ್ಯೋತ್ಸವʼ ಪ್ರಶಸ್ತಿ

Update: 2025-10-31 23:12 IST

ಬೀದರ್ : ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ದಿನಾಚರಣೆಯ 2025-26ನೇ ಸಾಲಿಗಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಾದ ಕಲೆ, ಸಂಗೀತ, ಸಾಹಿತ್ಯ, ಸಮಾಜಸೇವೆ, ಪತ್ರಿಕಾ ಮಾಧ್ಯಮ, ಜಾನಪದ, ಕನ್ನಡ ನಾಡು ನುಡಿ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ವ್ಯಕ್ತಿಗಳನ್ನು ಗೌರವ ಸನ್ಮಾನ ಮತ್ತು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಮತ್ತು ಪ್ರಶಸ್ತಿಗಾಗಿ ಆಯ್ಕೆ ಮಾಡಲಾದವರ ವಿವರ:

ರೇಖಾ ಅಪ್ಪಾರಾವ್ ಸೌದಿ (ಸಂಗೀತ ಕ್ಷೇತ್ರ), ಧನರಾಜ್ ದಶರಥ, ಶ್ರೀಕಾಂತ್ ಲಕ್ಷ್ಮಣ ಭವಾನಿ, ಬಸವಚೇತನ್ ವೈಜಿನಾಥ್, ಸಿದ್ರಾಮ್ ಶಂಕರೆಪ್ಪಾ (ಸಮಾಜ ಸೇವೆ), ಸೈಯದ್ ಮುಜೀಬ್ ಅಹ್ಮದ್ ಸೈಯದ್ ನಿಯಾಜ್, ಶಿವಕುಮಾರ್ ಶರಣಪ್ಪಾ ತುಂಗಾ, ಲೋಕೇಶ್ ಪ್ರಭುಶೆಟ್ಟಿ (ಕನ್ನಡ ಸೇವೆ), ಸ್ವರೂಪರಾಣಿ ಪಾಟೀಲ್, ಡಾ.ಸುನೀತಾ ಕೂಡ್ಲಿಕರ್, ಡಾ.ಶ್ರೇಯಾ ಮಹೀಂದ್ರಕರ್ (ಸಾಹಿತ್ಯ), ರಾಮಯ್ಯ ರಾಮಚಂದ್ರ (ಕೈ ಚಲಕ ಕಲಾ ಪ್ರದರ್ಶನ), ಮಲ್ಲಮ್ಮಾ ಮಾಧವರಾವ್, ಬಸಪ್ಪಾ ಶಿವಪ್ಪಾ ಭದಾಡೆ (ಜಾನಪದ ಕ್ಷೇತ್ರ), ಅರ್ಜುನರಾವ್ ಕಾಂಚೆ (ಸಂಗೀತ ಕ್ಷೇತ್ರ), ಅನೀಲಕುಮಾರ್ ದೇಶಮುಖ (ಮಾಧ್ಯಮ-ಎಲೆಕ್ಟ್ರಾನಿಕ್ ಮೀಡಿಯಾ ಕ್ಷೇತ್ರ), ಶ್ರಾವಣಕುಮಾರ್ ಮೇತ್ರೆ (ಮಾಧ್ಯಮ-ಛಾಯಾಗ್ರಹಣ ಕ್ಷೇತ್ರ).

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News