×
Ad

ಬೀದರ್ | ಮನೆ ಬೀಗ ಮುರಿದು 6 ಲಕ್ಷ 80 ಸಾವಿರಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ : ಪ್ರಕರಣ ದಾಖಲು

Update: 2025-08-22 22:59 IST

ಬೀದರ್ : ಮನೆ ಬೀಗ ಮುರಿದು 6 ಲಕ್ಷ 80 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನಗೈದಿರುವ ಘಟನೆ ಬೀದರ್ ನಗರದ ಶಿವನಗರ ಬಡಾವಣೆಯಲ್ಲಿ ನಡೆದಿದೆ.  

ಮೂಲತಃ ಆಂಧ್ರ ಪ್ರದೇಶದ ಒಡ್ದುಪಾಲಂ ಗ್ರಾಮದ ನಿವಾಸಿ ಶ್ರೀನಿವಾಸಲು ಅವರು ಕುಟುಂಬದೊಂದಿಗೆ ಸುಮಾರು 10 ವರ್ಷದಿಂದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ.16ರಂದು ಆಂಧ್ರ ಪ್ರದೇಶಕ್ಕೆ ಹೋದಾಗ ಶಿವನಗರದ ಬಾಡಿಗೆ ಮನೆಯ ಬಾಗಿಲು ಒಡೆದು 6 ಲಕ್ಷ 84 ಸಾವಿರ ರೂ. ಮೌಲ್ಯದ 76 ಚಿನ್ನದ ಆಭರಣಗಳು ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News