×
Ad

ಬೀದರ್| ಗುಡುಗು, ಗಾಳಿ ಸಹಿತ ಭಾರೀ ಮಳೆ : ಧರೆಗುರುಳಿದ ಹೆದ್ದಾರಿ ನಾಮಫಲಕ; ಮನೆಗೆ ಹಾನಿ

Update: 2026-05-19 21:25 IST

ಬೀದರ್ : ಜಿಲ್ಲೆಯ ಹಲವು ಕಡೆ ಗುಡುಗು ಹಾಗೂ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿದೆ. ಭಾಲ್ಕಿ-ಹುಮನಾಬಾದ್ ಹೆದ್ದಾರಿಯಲ್ಲಿರುವ ನಾಮಫಲಕ ಕೂಡ ಮುರಿದು ಬಿದ್ದಿದೆ.

ಜಿಲ್ಲೆಯ ಹಲವೆಡೆ ಮಂಗಳವಾರ ಸಾಯಂಕಾಲ ಭಾರೀ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗಿದ್ದು, ಭಾಲ್ಕಿ ಪಟ್ಟಣದ ಜನತಾ ಕಾಲೋನಿ ನಿವಾಸಿ ಶೋಭಾ ನಾಟೇಕರ್ ಅವರ ಮನೆಯ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿ ಮನೆಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 

ಭಾಲ್ಕಿ-ಹುಮನಾಬಾದ್ ಹೆದ್ದಾರಿಯ ನಿಜಾಂಪುರ್ ಸಮೀಪ ಅಳವಡಿಸಿದ್ದ ನಾಮಫಲಕ ಮುರಿದು ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News