×
Ad

ಬೀದರ್ | ಅಕ್ರಮ ಶೇಂದಿ ಸಾಗಣೆ : ವ್ಯಕ್ತಿಯ ಬಂಧನ

Update: 2025-10-24 16:43 IST

ಬೀದರ್ : ಅಕ್ರಮವಾಗಿ ಶೇಂದಿ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳವಾರ ಬೀದರ್ ರೈಲ್ವೆ ನಿಲ್ದಾಣದ ವೇದಿಕೆ ನಂ.1 ರಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಭಾಲ್ಕಿ ನಗರದ ಜ್ಯೋಶಿ ಗಲ್ಲಿಯ ನಿವಾಸಿಯಾಗಿದ್ದು, ಆತನಿಂದ 2 ಬ್ಯಾಗ್ ಗಳಲ್ಲಿದ್ದ ಸುಮಾರು 1,250 ರೂ. ಮೌಲ್ಯದ ಅಕ್ರಮವಾಗಿ ಸಾಗಿಸುತ್ತಿದ್ದ 25 ಲೀಟರ್ ಶೇಂದಿ ಸಾಗಾಣಿಕೆ ವಶಕ್ಕೆ ಪಡೆದು, ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News