×
Ad

ಬೀದರ್ | ಪತ್ರಕರ್ತನ ಮೇಲೆ ಹಲ್ಲೆ ಆರೋಪ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

Update: 2025-11-07 22:14 IST

ಬೀದರ್ : ಸುದ್ದಿ ಮಾಡಲು ತೆರಳಿದ ಗದಗ ಜಿಲ್ಲೆಯ ವರದಿಗಾರರೊಬ್ಬರ ಮೇಲೆ ಗೂಂಡಾ ವರ್ತನೆ ತೋರಿ ಹಲ್ಲೆ ಮಾಡಲಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೀದರ್ ಜಿಲ್ಲಾ ಸಾಟಲೈಟ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹೊಸದಾಗಿ ಮತದಾರರ ಪಟ್ಟಿ ಸೇಪರ್ಡೆಗೆ ನ.6 ಕೊನೆಯ ದಿನವಾಗಿತ್ತು. ಹೀಗಾಗಿ, ಗದಗ ನಗರದ ವಕೀಲಚಾಳದಲ್ಲಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ಅಕ್ರಮವಾಗಿ ಮತದಾರರನ್ನು ಸೇರ್ಪಡೆಗೊಳಿಸುತ್ತಿದ್ದಾರೆ. ತಮ್ಮ ಕಚೇರಿಯಲ್ಲಿಯೇ ಗೆಜೆಟೆಡ್ ಸರಕಾರಿ ನೌಕರರು, ಕಾಲೇಜು ಉಪನ್ಯಾಸಕರನ್ನು ಕರೆಸಿಕೊಂಡು ನೋಂದಣಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪತ್ರಕರ್ತ ಸುರೇಶ್ ಕಡ್ಲಿಮಟ್ಟಿ ವರದಿಗೆ ತೆರಳಿದಾಗ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಎಸ್.ವ್ಹಿ. ಸಂಕನೂರ್ ಮತ್ತು ಅವರ ಬೆಂಬಲಿಗರು ಗೂಂಡಾ ವರ್ತನೆ ತೋರಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಇಂತಹ ಗೂಂಡಾ ವರ್ತನೆಗೆ ಪತ್ರಕರ್ತರು ಎದೆಗುಂದುವುದಿಲ್ಲ. ಹೀಗಾಗಿ, ಹಲ್ಲೆ ಮಾಡಿರುವ ವಿಧಾನ ಪರಿಷತ್ ಸದಸ್ಯರ ಬೆಂಬಲಿಗರು ಹಾಗೂ ಇದಕ್ಕೆ ಪ್ರಚೋದನೆ ನೀಡಿದ ಪರಿಷತ್ ಸದಸ್ಯರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಜೊತೆಗೆ ಪತ್ರಕರ್ತರ ಬಳಿ ಕ್ಷಮೆಯಾಚಿಸಬೇಕು ಎಂದು ಬೀದರ್ ಜಿಲ್ಲಾ ಸಾಟಲೈಟ್ ಮೀಡಿಯಾ ಅಸೋಸಿಯೇಷನ್ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಸಾಟಲೈಟ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಕರಲೆ, ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್, ಗೌರವಾಧ್ಯಕ್ಷ ರಾಜಕುಮಾರ್ ಸ್ವಾಮಿ, ಉಪಾಧ್ಯಕ್ಷ ಸಂಜುಕುಮಾರ್ ಬುಕ್ಕಾ, ಎಲ್ ಎಸ್ ಕೃಷ್ಣ, ಮಲ್ಲಿಕಾರ್ಜುನ್, ಅನಿಲಕುಮಾರ ದೇಶಮುಖ, ಓಂಕಾರ್ ಮಠಪತಿ, ನಂದಕುಮಾರ್ ಕರಂಜೆ, ದುರ್ಗಪ್ಪಾ ಹೊಸಮನಿ, ವಿಶ್ವಕುಮಾರ್ ಕಲ್ಲಾ, ಲಿಂಗರಾಜ್ ಮರಕಲೆ, ಶಿವಾನಂದ್ ಅಮರಗೋಳ್, ಶಿವಯ್ಯಾ ಮಠಪತಿ, ಕಲ್ಲಪ್ಪಾ ಹಳ್ಳದಕೇರಿ, ಅಮರೇಶ್ ಹೀರೇಮಠ್, ಮಹೇಶ್ ಸಜ್ಜನಶೇಟ್ಟಿ, ಆಶಿಫ್ ಚಿದ್ರಿ, ಭರತ್ ಮರಕಲೆ, ಶರಣಯ್ಯಾ ಸ್ವಾಮಿ ಹಾಗೂ ದೇವರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News