ಬೀದರ್ | ಬ್ರೇಕ್ ಫೈಲ್‌ನಿಂದ ಕೆಕೆಆರ್‌ಟಿಸಿ ಬಸ್ ಮರಕ್ಕೆ ಢಿಕ್ಕಿ : ಪ್ರಯಾಣಿಕರು ಪಾರು
Update: 2025-10-29 20:19 IST
ಬೀದರ್ : ಉದಗಿರದಿಂದ ಭಾಲ್ಕಿ ಮಾರ್ಗವಾಗಿ ಬೀದರ್ ಕಡೆಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್ಸೊಂದು ಇಂದು ಸಾಯಂಕಾಲ ಭಾಲ್ಕಿ ತಾಲೂಕಿನ ಕೋನ ಮೇಳಕುಂದಾ ಗ್ರಾಮದ ಹತ್ತಿರ ಅಪಘಾತಕ್ಕೊಳಗಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್‌ನ ಬ್ರೇಕ್ ಫೈಲ್ ಆಗಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರು. ಆದ್ದರಿಂದ ಬಸ್ ರಸ್ತೆ ಬದಿ ಇರುವ ಮರಕ್ಕೆ ಢಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಬಸ್ಸು ಮರಕ್ಕೆ ಢಿಕ್ಕಿ ಹೊಡೆದ ತಕ್ಷಣವೇ ಬಸ್ಸಿನ ಕಿಟಕಿಯ ಗಾಜು ಒಡೆದು ಹೊರಗಡೆ ಬಂದಿದ್ದೇವೆ ಎಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಿಳಿಸಿದ್ದಾರೆ. ಘಟನೆ ಬಳಿಕ ತಕ್ಷಣವೇ ಸ್ಥಳೀಯರು ಪ್ರಯಾಣಿಕರ ನೆರವಿಗೆ ಧಾವಿಸಿ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.