×
Ad

ಬೀದರ್ | ಚಿಟಗುಪ್ಪ ತಾಲೂಕಿನ ಇಟಗಾ ಗ್ರಾಮದ ಬಳಿ 3.3 ತೀವ್ರತೆಯ ಲಘು ಭೂಕಂಪನ

Update: 2025-11-01 15:56 IST

 ಸಾಂದರ್ಭಿಕ ಚಿತ್ರ (PTI)

ಬೀದರ್ : ಚಿಟಗುಪ್ಪ ತಾಲೂಕಿನ ಇಟಗಾ ಗ್ರಾಮದಿಂದ 2.4 ಕಿ.ಮೀ. ಪಶ್ಚಿಮ ದಿಕ್ಕಿಗೆ ಶುಕ್ರವಾರ ಸಾಯಂಕಾಲ ಸುಮಾರು 7:17 ಗಂಟೆಗೆ 5 ಕಿ. ಮೀ ಆಳದಲ್ಲಿ 3.3 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚರಣಾ ಕೇಂದ್ರವು ಮಾಹಿತಿ ನೀಡಿದೆ.

ಭೂಕಂಪನ ಕೇಂದ್ರವು ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದಿಂದ 2.4 ಕಿ.ಮೀ ಪಶ್ಚಿಮ, ಕೊಡಂಬಲ್ ಗ್ರಾಮದಿಂದ 6.2 ಕಿ.ಮೀ ವಾಯುವ್ಯ, ಚಿಟಗುಪ್ಪ ತಾಲೂಕು ಕೇಂದ್ರದಿಂದ 6.3 ಕಿ.ಮೀ ನೈಋತ್ಯ, ಹುಮನಾಬಾದ್ ತಾಲ್ಲೂಕಿನ ಕಲ್ಲೂರು ಗ್ರಾಮದಿಂದ 8 ಕಿ.ಮೀ ಆಗ್ನೇಯ ಹಾಗೂ ಕಲಬುರಗಿ ಜಿಲ್ಲೆಯ ಭೂಕಂಪ ವೀಕ್ಷಣಾಲಯದಿಂದ 60 ಕಿ.ಮೀ ಈಶಾನ್ಯ ದಿಕ್ಕಿಗೆ ಇದೆ ಎಂದು ತಿಳಿದು ಬಂದಿದೆ.

ಈ ಭೂಕಂಪದ ಕೇಂದ್ರ ಬಿಂದುವಿನ ತೀವ್ರತೆಯ ನಕ್ಷೆಯ ಪ್ರಕಾರ ಗಮನಿಸಿದರೆ ಇದು ಅತೀ ಕಡಿಮೆ ತೀವ್ರತೆಯಾಗಿದೆ. ಭೂಕಂಪವು ಕೇಂದ್ರಬಿಂದುವಿನಿಂದ 40 ರಿಂದ 50 ಕಿ.ಮೀ ದೂರದವರೆಗೆ ಅನುಭವಿಸಬಹುದು. ಈ ರೀತಿಯ ಭೂಕಂಪವು ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಆದರೂ ಸ್ಥಳೀಯವಾಗಿ ಕಂಪನಗಳು ಅನುಭವಿಸಬಹುದು. ಭೂಕಂಪದ ಪ್ರಮಾಣ ಮತ್ತು ತೀವ್ರತೆ ಕಡಿಮೆ ಇರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚರಣಾ ಕೇಂದ್ರವು ಧೃಡಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News