×
Ad

ಬೀದರ್ | ಆಧುನಿಕ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ : ಸಿದ್ರಾಮಯ್ಯಾ ಎಸ್.ಸ್ವಾಮಿ

Update: 2025-07-24 19:21 IST

ಬೀದರ್ : ಸಮುದಾಯ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ರೈತರು ಹೆಚ್ಚೆಚ್ಚು ಬೆಳೆ ಉತ್ಪಾದಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಹುಬುದು ಎಂದು ಬೀದರ್ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸಿದ್ರಾಮಯ್ಯಾ ಎಸ್.ಸ್ವಾಮಿ ಅವರು ಸಲಹೆ ನೀಡಿದರು.

ಬೀದರ್ ನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಮುಂಗಾರು ಹಂಗಾಮಿನ ಸಿದ್ದತೆಯ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನಲ್ಲಿ ಮರ, ಗಿಡಗಳನ್ನು ಬೆಳೆಸಬೇಕು. ರೈತರು ಸಿರಿಧಾನ್ಯ ಬಳಸುವಂತೆ ಮತ್ತು ಅದರ ಮಹತ್ವದ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಬೆಳೆ ವಿಮೆಗೆ ನೋದಾಯಿಸಲು ಜು.31 ರಂದು ಕೊನೆಯ ದಿನಾಂಕವಾಗಿದ್ದು, ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಸಮಗ್ರ ಕೃಷಿ ಪದ್ದತಿ ಮತ್ತು ಕೃಷಿ ಹೊಂಡ ಅಳವಡಿಸಿಕೊಳ್ಳುವುದರ ಮೂಲಕ ಸಾವಯುವ ಕೃಷಿಗೆ ಒತ್ತು ನೀಡಬೇಕು ಎಂದರು.

ಪ್ರತಿಯೊಬ್ಬರು ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಪಡೆಯಬೇಕು. ಕೃಷಿ ಭಾಗ್ಯ ಯೋಜನೆ, ಕೃಷಿ ಹೊಂಡಗಳ ಪ್ರಚಾರ, ರೈತರಿಗೆ ಪ್ರಯೋಜನೆಯಾಗಬೇಕು. ಸರ್ಕಾರದ ಸಹಾಯ ಧನದಲ್ಲಿ ದೊರೆಯುವ ತುಂತುರು ನೀರಾವರಿ ಘಟಕ, ಕೃಷಿ ಯಾಂತ್ರಿಕರಣ, ಸಮಗ್ರ ಕೃಷಿ ಪದ್ದತಿ, ಬಿತ್ತನೆ ಬೀಜ ಹಾಗೂ ನ್ಯಾನೊ ಯುರೀಯಾ, ಸಂಕಿರ್ಣ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ರೇಷ್ಮೆ, ಕೃಷಿ ವಿಜ್ಞಾನ ಕೇಂದ್ರದ ನಾನಾ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬೀದರ್ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಮಹೇಶ್ ಚಿಂತಾಮಣಿ, ಖಜಾಂಚಿ ಸಂಜುಕುಮಾರ್, ಮಲ್ಲಿಕಾರ್ಜುನ್ ಹಚ್ಚಿ, ದಯಾನಂದ್ ಸ್ವಾಮಿ, ಜಿಲ್ಲಾ ಪ್ರತಿನಿಧಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಮನ್ಮಥಸ್ವಾಮಿ, ವೈಜಿನಾಥ್ ಭುಯ್ಯಾ, ನಾಗಯ್ಯಾ ಸ್ವಾಮಿ, ಮಹಾದೇವ್ ಸ್ವಾಮಿ, ಅಶೋಕ್ ಬಿರಾದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News