ಬೀದರ್ | ಕಾರು ಪಲ್ಟಿಯಾಗಿ ಒಂದು ವರ್ಷದ ಮಗು ಮೃತ್ಯು
Update: 2025-10-17 21:46 IST
ಬೀದರ್ : ವೇಗವಾಗಿ ಬಂದ ಕಾರೊಂದು ಪಲ್ಟಿಯಾಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ಬ್ಯಾಲಹಳ್ಳಿ ಗ್ರಾಮದ ಕಾರಂಜಾ ಜಲಾಶಯದ ಹತ್ತಿರ ನಡೆದಿದೆ.
ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿ ಸಹರ್ಷಿಣಿ (1) ಮೃತಪಟ್ಟ ಮಗುವಾಗಿದೆ.
ಆಳಂದ ತಾಲೂಕಿನ ನಿವಾಸಿ ಶಿವಕುಮಾರ್ ಎನ್ನುವವರು ತನ್ನ ಕುಟುಂಬ ಸಹಿತ ಆಳಂದದಿಂದ ಬೀದರ್ ಗೆ ಆಸ್ಪತ್ರೆಗೆಂದು ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು, ಸಹರ್ಷಿಣಿ ಎಂಬ ಮಗು ಮೃತಪಟ್ಟಿದೆ. ಇನ್ನುಳಿದ ಕುಟುಂಬಸ್ಥರಾದ ಶಿವಕುಮಾರ್, ಪತ್ನಿ ಸಪ್ನಾ ಹಾಗೂ ಇನ್ನೊಂದು ಮಗುವಿಗೆ ಗಾಯಗಳಾಗಿದ್ದು, ಬೀದರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಧನ್ನೂರು ಪೊಲೀಸ್ ಟನೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.