ಬೀದರ್ | ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ
Update: 2025-11-05 22:59 IST
ಬೀದರ್ : ಡಿಜಿಟಲ್ ಖಾತೆ ಮಾಡಲು ಲಂಚ ಪಡೆಯುವಾಗ ಪಿಡಿಒ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಔರಾದ್ ತಾಲೂಕಿನ ಧೂಪತಮಹಾಗಾಂವ್ ಪಂಚಾಯತಿಯಲ್ಲಿ ನಡೆದಿದೆ.
ಔರಾದ್ ತಾಲೂಕಿನ ಧೂಪತಮಹಾಗಾಂವ್ ಪಂಚಾಯತ್ ಪಿಡಿಒ ಅನಿತಾ ರಾಠೋಡ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅನಿತಾ ರಾಠೋಡ್ ತಮ್ಮ ಪತಿಯ ಮೂಲಕ ರಾಜಕುಮಾರ್ ಪಾಟೀಲ್ ಎಂಬುವವರ ಡಿಜಿಟಲ್ ಖಾತೆ ಮಾಡಲು 14 ಸಾವಿರ ರೂ. ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 12 ಸಾವಿರ ರೂ. ಗೆ ಲಂಚ ನಿಗದಿ ಮಾಡಿದ್ದರು ಎನ್ನಲಾಗಿದೆ.
ಈ ಕುರಿತು ಆರೋಪಿ ಪಿಡಿಒ ಅನಿತಾ ಹಾಗೂ ಅವರ ಪತಿ ದಯಾನಂದ್ ರಾಠೋಡ್ ಅವರನ್ನು ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.