×
Ad

ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ : ಪ್ರತಿಭಟನೆ ಕೈ ಬಿಟ್ಟ ರೈತರು

Update: 2025-11-20 18:19 IST

ಬೀದರ್ : ಪ್ರತಿ ಟನ್ ಕಬ್ಬಿಗೆ 2,950 ರೂ. ನಿಗದಿಗೊಳಿಸಿರುವುದರಿಂದ ರೈತರು  ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸುಮಾರು 8 ದಿನಗಳಿಂದ ಮೈ ಕೊರೆಯುವ ಚಳಿಯಲ್ಲಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಜಿಲ್ಲಾಡಳಿತ ಪ್ರತಿ ಟನ್ ಕಬ್ಬಿಗೆ 2,950 ರೂ. ದರ ನಿಗದಿ ಮಾಡಲಾಗಿದೆ. ಇದರ ಬೆನ್ನಲ್ಲೆ ರೈತರು ಪ್ರತಿಭನೆಯನ್ನು ಹಿಂಪಡೆದುಕೊಂಡಿದ್ದಾರೆ.  

ಈ ಹಿಂದೆ ಜಿಲ್ಲಾಡಳಿತ ಪ್ರತಿ ಟನ್ ಕಬ್ಬಿಗೆ 2,900ರೂ. ದರ ನಿಗದಿಗೊಳಿಸಿತ್ತು. ಆದರೆ ಈ ದರವನ್ನು ಒಪ್ಪದ ರೈತರು ಅಹೋ ರಾತ್ರಿ ಧರಣಿ ಕೈಗೊಂಡಿದ್ದರು. ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿದ್ದರು. 

ಈ ಕುರಿತು ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ್ ಸ್ವಾಮಿ, ಪ್ರತಿ ಟನ್ ಕಬ್ಬಿಗೆ 2,950 ರೂ. ಬೆಲೆ ನಿಗದಿ ಮಾಡಿದಕ್ಕಾಗಿ ನಮಗೆ ಹೆಚ್ಚಿನ ಸಂತೋಷವಿಲ್ಲ. ಕಾರಣ ನಾವು ಅದಕ್ಕಿಂತ ಹೆಚ್ಚಿನ ಬೇಡಿಕೆ ಇಟ್ಟಿದ್ದೆವು. ಆದರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಕಬ್ಬಿನ ಬೀಜ ತರಿಸಿಕೊಳ್ಳುತ್ತಿರುವ ನಮಗೆ ಇಲ್ಲಿಯೇ ಕಬ್ಬಿನ ಬೀಜದ ರೀಸರ್ಚ್ ಸೆಂಟರ್ ನಿರ್ಮಾಣ ಮಾಡುವುದಕ್ಕೆ ಭರವಸೆ ನೀಡಿದ್ದಾರೆ. ಹಾಗಾಗಿ ನಮ್ಮ ಪ್ರತಿಭಟನೆ ಹಿಂಪಡೆದಿದ್ದೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News