ಬೀದರ್ | ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ : ಜಿಲ್ಲಾ ಪೊಲೀಸ್ ವತಿಯಿಂದ ಮ್ಯಾರಾಥಾನ್
Update: 2025-10-31 18:55 IST
ಬೀದರ್ : ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ನಿರ್ಮಾಣ ಮಾಡಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ನಿಮಿತ್ಯ ಜಿಲ್ಲಾ ಪೊಲೀಸ್ ವತಿಯಿಂದ ಇಂದು ಮ್ಯಾರಾಥಾನ್ ಓಟ ನಡೆಸಲಾಯಿತು.
ಏಕತೆಗಾಗಿ ಓಟ ಎನ್ನುವ ಹೆಸರಿನ ಈ ಮ್ಯಾರಾಥಾನ್ ಓಟವು ನಗರದ ಬಸವೇಶ್ವರ್ ವೃತ್ತದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳ ಮೂಲಕ ಶಿವನಗರ ವಾಕಿಂಗ್ ಸ್ಪಾಟ್ ವರೆಗೆ ಸುಮಾರು 3 ಕಿ. ಮೀ. ನಡೆಸಲಾಯಿತು.
ಮ್ಯಾರಾಥಾನ್ ನಲ್ಲಿ ಪ್ರಥಮ ಬಹುಮಾನ ಪೊಲೀಸ್ ಸಿಬ್ಬಂದಿ ಮಾಣಿಕ್, ದ್ವಿತೀಯ ಬಹುಮಾನ ಮಹಾಂತೇಶ್ ಕಾಡಪ್ಪಗೋಳ್ ಹಾಗೂ ತೃತೀಯ ಬಹುಮಾನ ನಾಗೇಶ್ ಅಲ್ಲಾಪುರ್ ಅವರಿಗೆ ನೀಡಲಾಯಿತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಶಾಹಿನ್ ಕಾಲೇಜಿನ ವಿದ್ಯಾರ್ಥಿನಿ ಅಲ್ಮೀರಾ ಅವಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಮ್ಯಾರಾಥಾನ್ ನಲ್ಲಿ ಶಾಹಿನ್ ಕಾಲೇಜ್, ಜ್ಞಾನಸುಧಾ ಕಾಲೇಜ್ ಹಾಗೂ ಇತರ ಕಾಲೇಜಿನ ವಿದ್ಯಾರ್ಥಿಗಳು ಜೊತೆಗೆ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಭಾಗವಹಿಸಿದ್ದರು.