ಬೀದರ್ | ನ.4 ರಿಂದ ಸರಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಲಿಂಗ್
ಬೀದರ್ : 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕ, ಮುಖ್ಯ ಶಿಕ್ಷಕ ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಸಂಬಂಧ ಅಧಿಸೂಚನೆಯಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ನಿರ್ವಹಿಸಲು ಮಾರ್ಗಸೂಚಿ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ-4ನ್ನು ಅನುಬಂಧ-2ರಲ್ಲಿ ಹೊರಡಿಸಿರುವ ಪ್ರಯುಕ್ತ 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಅನ್ನು ನ.4 ರಿಂದ 7ರ ವರೆಗೆ ಬೀದರ್ ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.4ರ ಬೆಳಿಗ್ಗೆ 10 ಗಂಟೆಗೆ ಪ್ರಾಥಮಿಕ ಶಾಲಾ ವಿಶೇಷ ಶಿಕ್ಷಕ ವೃಂದ (1 ರಿಂದ ಮುಗಿಯುವವರೆಗೆ), 10:30 ಗಂಟೆಗೆ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ವೃಂದ (1 ರಿಂದ ಮುಗಿಯುವವರೆಗೆ), 11 ಗಂಟೆಗೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವೃಂದ (1 ಮುಗಿಯುವವರೆಗೆ), 12:30 ಗಂಟೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದ (1 ರಿಂದ 300ರ ವರೆಗೆ) ನಡೆಯಲಿದೆ.
ನ.5 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದ (301 ರಿಂದ 900ರ ವರೆಗೆ), ನ.6 ರಂದು 9 ಗಂಟೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದ (901 ರಿಂದ ಮುಗಿಯುವವರೆಗೆ) ಹಾಗೂ ನ.7 ರಂದು 10 ಗಂಟೆಗೆ ಪ್ರೌಢ ಶಾಲಾ ವಿಶೇಷ ಶಿಕ್ಷಕ ವೃಂದ (1 ರಿಂದ ಮುಗಿಯುವವರೆಗೆ), ಮಧ್ಯಾಹ್ನ 12 ಗಂಟೆಗೆ ಪ್ರೌಢ ಶಾಲಾ ದೈಹಿಕ ಶಿಕ್ಷಕ ವೃಂದ (1 ರಿಂದ ಮುಗಿಯುವವರೆಗೆ), ಮಧ್ಯಾಹ್ನ 1 ಗಂಟೆಗೆ ಪ್ರೌಢ ಶಾಲಾ ಸಹ ಶಿಕ್ಷಕ ವೃಂದ (1 ರಿಂದ ಮುಗಿಯುವವರೆಗೆ) ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರು ವರ್ಗಾವಣೆ ಕೌನ್ಸಲಿಂಗ್ ಸಂಬಂಧಿಸಿದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿಷಯ ನಿರ್ವಾಹಕರು, ಸಂಬಂಧಿಸಿದ ವರ್ಗಾವಣೆ ನೋಡಲ್ ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಕೋರಿಕೆ ವರ್ಗಾವಣೆ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರು ನಿಗದಿತ ವೇಳಾಪಟ್ಟಿಯಂತೆ ಕೌನ್ಸಲಿಂಗ್‌ನಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ನಿಗದಿತ ಸಮಯಕ್ಕೆ ಹಾಜರಾಗದಿದ್ದಲ್ಲಿ ಗೈರು ಹಾಜರಿ ಎಂದು ಪರಿಗಣಿಸಲಾಗುವುದು. ನಂತರದಲ್ಲಿ ಕೌನ್ಸಲಿಂಗ್ ಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.