×
Ad

ಬೀದರ್ | ಯುವತಿಯರು ಸರಕಾರದ ಯೋಜನೆ ಪಡೆಯುವ ಮೂಲಕ ಉದ್ಯಮಿಯಾಗಬಹುದು : ಲಕ್ಷ್ಮೀಕಾಂತ್

Update: 2025-11-04 14:55 IST

ಬೀದರ್ : ಸರ್ಕಾರದ ಯೋಜನೆ ಪಡೆಯುವ ಮೂಲಕ ಯುವತಿಯರು ಒಳ್ಳೆಯ ಉದ್ಯಮಿಯಾಗಬಹುದು ಎಂದು ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್ ಅವರು ತಿಳಿಸಿದರು.

ನಗರದ ಸರಕಾರಿ ಐಟಿಐ ಕಾಲೇಜಿನಲ್ಲಿ, ಬೀದರ್ ನ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಬೇಂಗಳೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮಹಿಳಾ ಭಾವಿ ಉದ್ಯಮಶೀಲ ಯವತಿಯರಿಗೆ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಯವತಿಯರಿಗೆ ಉದ್ಯಮ ಮಾಡಲು ಸರ್ಕಾರದಿಂದ ಕೆಲವೊಂದು ಯೋಜನೆಗಳು ಇರುತ್ತದೆ. ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಯುವತಿಯರ ಜೀವನ ಸಾರ್ಥಕವಾಗುತ್ತದೆ. ಯಾವುದೇ ರೀತಿಯ ಸಾಧನೆ ಮಾಡಬೇಕಾದರೆ ಈ ಯೋಜನೆಗಳು ಆಧಾರವಾಗುತ್ತವೆ. ಸಲಹೆಗಳನ್ನು ಪಡೆಯುವ ಮೂಲಕ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದರು.

ಭಾರತೀಯ ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ಸುನೀಲಕುಮಾರ್ ಅವರು ಮಾತನಾಡಿ, ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸಲು ಸಾಕಷ್ಟು ಅವಕಾಶಗಳು ಲಭ್ಯವಿರುತ್ತದೆ. ನಮ್ಮ ದೇಶದಲ್ಲಿ ಯುವ ಜನ ಹೆಚ್ಚಿನ ಸಂಖೆಯಲ್ಲಿದ್ದು, ಬುದ್ದಿವಂತರಿದ್ದಾರೆ. ಸರ್ಕಾರದಿಂದ ಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆ ಮತ್ತು ಸೇವಾ ಚಟುವಟಿಕೆ ಸ್ಥಾಪಿಸಲು ಹೆಚ್ಚಿನ ಅವಕಶವಿರುತ್ತದೆ. ಈ ಅವಕಾಶವನ್ನು ಯುವ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಡಾಕ್ ನ ಉಪನ್ಯಾಶಕ ಸೈಯದ್ ಅಶ್ಫಕ್ ಅಹ್ಮದ್ ಹಾಗೂ ಸಿಡಾಕ್ ನ ಜಿಲ್ಲಾ ತರಬೇತಿ ಅಧಿಕಾರಿ ಮಲ್ಲಪ್ಪಾ ಸೇರಿದಂತೆ ತರಬೇತಿ ಪಡೆದ ಯುವತಿಯರು, ಮಹಿಳೆಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News