ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಎಲ್ಲರ ಸಹಕಾರ ಅವಶ್ಯ: ರಾಜೇಶ್ ಲಿಲೋಥಿಯಾ

ಹುಮನಾಬಾದ್ ನಲ್ಲಿ 'ಸಂಘಟನಾ ಸೃಜನ ಅಭಿಯಾನ'

Update: 2026-07-30 20:43 IST

ಹುಮನಾಬಾದ್ : ರಾಷ್ಟ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಎಲ್ಲರೂ ಸಹಕಾರ ನೀಡುವುದು ಅವಶ್ಯಕವಾಗಿದೆ ಎಂದು ಎಐಸಿಸಿ ನಿರೀಕ್ಷಕ ರಾಜೇಶ್ ಲಿಲೋಥಿಯಾ ಹೇಳಿದರು.

ನಗರದ ಸರಕಾರಿ ನೌಕರರ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಸಂಘಟನಾ ಸೃಜನ್ ಅಭಿಯಾನ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಒಳಪಟ್ಟ ಎಲ್ಲಾ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಒಟ್ಟಾಗಿ ಬೂತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಜತೆಗೆ ಮಹಿಳಾ ಸಂಘಟನೆಯ ಪದಾಧಿಕಾರಿಗಳನ್ನು ಮುಂಚೂಣಿಗೆ ತರುವ ಮೂಲಕ ಪಕ್ಷಕ್ಕೆ ಲಾಭ ತಂದುಕೊಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ನಮ್ಮ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಅನೇಕ ರಾಷ್ಟ್ರೀಯ ನಾಯಕರು ವಿದ್ಯಾರ್ಥಿಗಳ ಧ್ವನಿಯಾಗಿದ್ದರು. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಈ ವಿಚಾರ ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕನಿಗೂ ಮುಟ್ಟಿಸುವ ಜವಾಬ್ದಾರಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಮಾಜಿ ಶಾಸಕ ಹುಸೇನಸಾಬ್, ಕೆಪಿಸಿಸಿ ವೀಕ್ಷಕ ರಮೇಶ್ ಮರಗೂಳ್, ಕೆಪಿಸಿಸಿ ವೀಕ್ಷಕಿ ಜ್ಯೋತಿ ಮರಗೂಳ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವೀರಣ್ಣ ಪಾಟೀಲ್, ರೇವಣಸಿದ್ದಪ್ಪ ಪಾಟೀಲ್, ಗಣೇಶ್ ಪಾಟೀಲ್, ಅಹ್ಮದ್ ಮೈನೋದ್ಧಿನ್, ಅಫ್ಸರಮಿಯ, ಓಂಕಾರ್ ತುಂಬಾ, ಉಮೇಶ್ ಜಮಗಿ, ರಾಹೀಲ್ ಖಿಲ್ಜಿ, ಸೈಯದ್ ಜಫರ್, ದೇವೇಂದ್ರ ಪೋಲಾ, ಕಲಾವತಿ ರಜಪೂತ್, ಶೋಭಾ ಪಾಟೀಲ್, ಸುಮಿತ್ರಾ ಪರೀಟ್, ಅಲ್ಕಾರಾಣಿ, ಅಶ್ವಿನಿ ಪಾಟಿಲ್, ಸಂಜೀವಕುಮಾರ್ ಹುಣಜಿ, ಭೀಮಶಾ ಚಂದನಹಳ್ಳಿ, ವಿಜಯಕುಮಾರ್ ಪವಾರ್ ಹಾಗೂ ಸಚೀನ್ ಕಲ್ಲೂರ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News