×
Ad

ಹುಲಸೂರ್ | ಶೆಡ್ಡಿನ ಬೀಗ ಮುರಿದು 1.40 ಲಕ್ಷ ರೂ. ಮೌಲ್ಯದ 12 ಮೇಕೆಗಳ ಕಳವು : ಪ್ರಕರಣ ದಾಖಲು

Update: 2026-07-11 17:10 IST

ಹುಲಸೂರ್ : ತಾಲೂಕಿನ ಅಳವಾಯಿ ಗ್ರಾಮದ ರೈತನೊಬ್ಬರ ಜಮೀನಿನಲ್ಲಿದ್ದ ಶೆಡ್ಡಿನ ಬೀಗ ಮುರಿದು ಸುಮಾರು 1.40 ಲಕ್ಷ ರೂ. ಮೌಲ್ಯದ 12 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೇಕೆಗಳ ಮಾಲೀಕ ಪ್ರವೀಣ್ ಬಂಡಾರಿ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಜಮೀನಿನಲ್ಲಿ ಕೃಷಿಯೊಂದಿಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದು, ಜು.9ರಂದು ರಾತ್ರಿ ಎಂದಿನಂತೆ ಮೇಕೆಗಳನ್ನು ಶೆಡ್ಡಿನೊಳಗೆ ಕಟ್ಟಿ ಬೀಗ ಹಾಕಿ ಮನೆಗೆ ತೆರಳಿದ್ದರು.

ಮರುದಿನ ಬೆಳಿಗ್ಗೆ ಜಮೀನಿಗೆ ಬಂದಾಗ ಶೆಡ್ಡಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ನಾಲ್ಕು ಹೆಣ್ಣು ಮೇಕೆಗಳು, ಒಂದು ಗಂಡು ಮೇಕೆ ಹಾಗೂ ಏಳು ಮೇಕೆ ಮರಿಗಳು ಸೇರಿದಂತೆ ಒಟ್ಟು 12 ಮೇಕೆಗಳು ಕಳ್ಳತನವಾಗಿರುವುದು ಗೊತ್ತಾಗಿದೆ.

ಕಳ್ಳತನವಾಗಿರುವ ಮೇಕೆಗಳ ಮೌಲ್ಯ ಸುಮಾರು 1.40 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News