×
Ad

ಹುಮನಾಬಾದ್ | ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಯುವಕ

Update: 2026-07-10 18:18 IST

ಹುಮನಾಬಾದ್ : ಆಯತಪ್ಪಿ ಬಾವಿಗೆ ಬಿದ್ದಿದ್ದ ಜಿಂಕೆ ಮರಿಯೊಂದನ್ನು ಯುವಕನೊಬ್ಬ ರಕ್ಷಿಸಿದ ಘಟನೆ ತಾಲೂಕಿನ ಮೊಳಕೇರಾ ಗ್ರಾಮದ ಹೊಲವೊಂದರಲ್ಲಿ ಶುಕ್ರವಾರ ನಡೆದಿದೆ.

ಆಹಾರ ಅರಸಿಕೊಂಡು ಅಥವಾ ದಾರಿ ತಪ್ಪಿ ಬಂದಿದ್ದ ಜಿಂಕೆ ಮರಿ ಆಕಸ್ಮಿಕವಾಗಿ ರೈತರೊಬ್ಬರ ಹೊಲದಲ್ಲಿದ್ದ ಬಾವಿಗೆ ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಯುವಕ ಮಂಜುನಾಥ್ ಬಾವಿಗಿಳಿದು ಜಿಂಕೆ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ಸಮಯಪ್ರಜ್ಞೆ ಮೆರೆದು ಮೂಕಪ್ರಾಣಿಯ ಜೀವ ಉಳಿಸಿದ ಮಂಜುನಾಥ್ ಅವರ ಸಾಹಸ ಹಾಗೂ ಪ್ರಾಣಿ ಪ್ರೇಮಕ್ಕೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಿಸಲಾದ ಜಿಂಕೆ ಮರಿಯನ್ನು ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News