×
Ad

ಬೀದರ್ | ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನ್ನು ಅಮಾನತುಗೊಳಿಸುವಂತೆ ಕರವೇಯಿಂದ ಜಿಲ್ಲಾಧಿಕಾರಿಗೆ ಮನವಿ

Update: 2025-05-30 22:33 IST

ಬೀದರ್ :  ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿದೆ. 

ʼಬಾಲಕಿಯರ ಪ್ರೌಢ ಶಾಲೆಯ ಹೊಸ ಕಟ್ಟಡ ನಿರ್ಮಾಣದ ಟೆಂಡರ್‌ನಲ್ಲಿ ಸಾಕಷ್ಟು ಲೋಪದೋಶಗಳಿದೆ. ಲೋಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ನೀಡಲು ಸಹಾಯವಾಗುವಂತೆ ಸರಕಾರದ ಆದೇಶ ಗಾಳಿಗೆ ತೂರಿ ಟೆಂಡರ್‌ ಕರೆದಿದ್ದಾರೆ. ಇಲ್ಲಿವರೆಗೆ ಕರೆದ ಟೆಂಡರ್‌ಗಳು ಮತ್ತು ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಬೇಕು. ಶಿವಕುಮಾರ್ ಕಾಮಶೆಟ್ಟಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.  

ಈ ವೇಳೆ ಜಿಲ್ಲಾಧ್ಯಕ್ಷ ವಿ.ಎಲ್.ಮಾರ್ಟಿನ್, ಉಪಾದ್ಯಾಕ್ಷ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಕಮಠಾಣ, ಆಸ್ಕರ್ ಫರ್ನಾಂಡಿಸ್, ಜಾನ್ ವೇಸ್ಲೀ, ಮೋಜಸ್ ನಿರ್ಣಾಕರ್, ಹರೀಶ್ ಖಂಡೆ, ವಿನೋದ್ ಚಿಟ್ಟಾ, ಕೃಷ್ಣಾ ವಾರೀಕ್ ಹಾಗೂ ಅಬ್ರಾಹಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News