×
Ad

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ ಶಿವಕುಮಾರ್ ಆಯ್ಕೆ

Update: 2025-10-16 23:04 IST

ಬೀದರ್: ಭಾಲ್ಕಿ ತಾಲೂಕಿನ ವಕೀಲರ ಸಂಘದ 2025-26ನೇ ಸಾಲಿಗೆ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ವಕೀಲ ಕೆ.ಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಚುನಾವಣೆ ಜರುಗಿದ್ದವು. ಒಟ್ಟು 124 ಮತಗಳ ಪೈಕಿ ವಕೀಲ ಕೆ.ಕೆ ಶಿವಕುಮಾರ್ ಅವರಿಗೆ 62 ಮತ್ತು ಇವರ ಎದುರಾಳಿ ಮಹೇಶ್ ಅವರಿಗೆ 62 ಮತಗಳು ಬಿದ್ದಿದ್ದವು. ಇಬ್ಬರಿಗೂ ಸಮಾನವಾದ ಮತದಾನ ಬಿದ್ದಿದ್ದರಿಂದ ಇಬ್ಬರು 6 ತಿಂಗಳುಗಳ ಕಾಲ ಅಧಿಕಾರ ಹಂಚಿಕೊಂಡಿದ್ದರು.

ಇದೀಗ ಮಹೇಶ್ ಅವರ 6 ತಿಂಗಳ ಅವಧಿ ಮುಗಿದಿದ್ದು, ಇದೀಗ ವಕೀಲ ಕೆ.ಕೆ ಶಿವಕುಮಾರ್ ಅವರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News