ಬೀದರ್ | ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
Update: 2025-10-16 19:46 IST
ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಜಾಜನಮುಗಳಿ ಗ್ರಾಮದ ನಿವಾಸಿ ಶ್ರೀಮಂತ್ ಬರ್ಮಾ ಮಂಜೂಳೆ (77) ಇವರು ಆ.28 ರಂದು ಮನೆಯಿಂದ ಹೊರಗಡೆ ಹೋಗಿ ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯು 5 ಅಡಿ ಎತ್ತರ, ದುಂಡು ಮುಖ, ಸಾದಾ ಕಪ್ಪು ಬಣ್ಣ, ಮನೆಯಿಂದ ಹೊರಡುವಾಗ ಮೈಮೇಲೆ ಬಿಳಿ ಬಣ್ಣದ ಧೋತಿ ಹಾಗೂ ಬಿಳಿ ಬಣ್ಣದ ನೆಹರು ಶರ್ಟ್ ಮತ್ತು ಬಿಳ್ಳಿ ಬಣ್ಣದ ಟೋಪಿ ಧರಿಸಿದ್ದರು. ಇವರು ಮರಾಠಿ ಮತ್ತು ತೆಲಗು ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಸಂಖ್ಯೆ: 94808 03460 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.