×
Ad

ನಮ್ಮ ಜೀವಕ್ಕೆ ಅಪಾಯವಿದ್ದು, ತಕ್ಷಣವೇ ಶಾಸಕ ಪ್ರಭು ಚೌವ್ಹಾಣ್ ಅವರ ಪುತ್ರ ಪ್ರತೀಕ್ ಚೌವ್ಹಾಣ್ ಅವರ ಬಂಧನವಾಗಬೇಕು : ಸಂತ್ರಸ್ತೆ ಯುವತಿ

Update: 2025-08-16 21:05 IST

ಬೀದರ್ : ನಮ್ಮ ಇಡೀ ಕುಟುಂಬಕ್ಕೆ ಶಾಸಕ ಪ್ರಭು ಚೌವ್ಹಾಣ್ ಅವರ ಪುತ್ರ ಪ್ರತೀಕ್ ಚೌವ್ಹಾಣ್ ಅವರಿಂದ ಜೀವಕ್ಕೆ ಅಪಾಯವಿದ್ದು ಅವರನ್ನು ತಕ್ಷಣವೇ ಬಂಧನ ಮಾಡಬೇಕು ಎಂದು ಸಂತ್ರಸ್ತೆ ಯುವತಿಯು ಒತ್ತಾಯಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಅವರು, ನಾನು ಅತ್ಯಾಚಾರ ಪ್ರಕರಣ ದಾಖಲು ಮಾಡಿ ಸುಮಾರು 24 ದಿನವಾದರೂ ಪ್ರತೀಕ್ ಚೌವ್ಹಾಣ್ ಅವರ ಬಂಧನವಾಗಿಲ್ಲ. ನಾನು ಬೀದರ್ ಗೆ ಹೋಗಿದ್ದಾಗ ಈ ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆಯಾಗಿದೆ ಎಂದು ಗೊತ್ತಾಗಿದೆ. ಈಗ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಬಂದು ವಿಚಾರಿಸಿದರೆ ಇಲ್ಲಿ ಇನ್ನು ಆ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಪ್ರಕರಣ ಬೆಂಗಳೂರಿಗೆ ವರ್ಗಾವಣೆಯಾಗಿ 8 ದಿವಸ ಕಳೆದರೂ ಇಲ್ಲಿಗೆ ಇನ್ನು ಕೂಡ ಫೈಲ್ ತಲುಪಿಲ್ಲ ಎಂದು ಹೇಳುತ್ತಿದ್ದಾರೆ.

ಮೊದಲ ಘಟನೆ ಬೆಂಗಳೂರಲ್ಲೇ ಆಗಿದ್ದರಿಂದ ಪ್ರಕರಣವನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕಾರಣ ಹೇಳಲಾಗುತ್ತಿದೆ. ನಾನು ಎರಡು ದಿನಗಳಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪ್ರಯತ್ನ ಮಾಡುತ್ತಿದ್ದೇನೆ. ಅವರ ಮನೆಯ ಮುಂದೆ ಹೋದರೆ ನಮಗೆ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಮುಖ್ಯಮಂತ್ರಿಯವರು ಎರಡು ನಿಮಿಷ ಭೇಟಿಯಾದರೂ ಕೂಡ ನಾನು ನನ್ನ ಪರಿಸ್ಥಿತಿ ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಪ್ರತೀಕ್ ಆರಾಮವಾಗಿ ಎಲ್ಲೋ ಕುಳಿತಿರಬಹುದು. ಆದರೆ ಸಂತ್ರಸ್ತೆಯಾದ ನಮಗೆ ಇಲ್ಲಿ ತುಂಬಾ ತೊಂದರೆಯಾಗುತ್ತಿದೆ. 15 ದಿನಗಳಿಂದ ನಾನು ಪ್ರತೀಕ್ ಅವರ ಬಂಧನ ಮಾಡುವಂತೆ ಒತ್ತಾಯಿಸಿ ಓಡಾಡುತ್ತಿದ್ದೇನೆ. ಆದರೆ ಇಲ್ಲಿವರೆಗೆ ನನಗೆ ನ್ಯಾಯ ಸಿಗಲಿಲ್ಲ. ಅವರ ಬಂಧನ ಕೂಡ ಆಗಿಲ್ಲ. ಆದಷ್ಟು ಬೇಗ ಅವರನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News