×
Ad

ದೂರದೃಷ್ಟಿ ಹೊಂದಿದ್ದ ರಾಜೀವ್ ಗಾಂಧಿ ಅಂದೇ ಡಿಜಿಟಲ್ ಕ್ರಾಂತಿಗೆ ಅವರು ಮುನ್ನುಡಿ ಬರೆದಿದ್ದರು: ಆರ್. ದೊರೆ

Update: 2025-08-13 22:13 IST

ಬೀದರ್: ದೂರ ದೃಷ್ಟಿ ಹೊಂದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಇಂದಿನ ತಂತ್ರಜ್ಞಾನ, ಡಿಜಿಟಲ್ ಕ್ರಾಂತಿಗೆ ಅವರು ಅಂದೇ ಮುನ್ನುಡಿ ಬರೆದಿದ್ದರು ಎಂದು ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿ ಅಧ್ಯಕ್ಷ ಆರ್. ದೊರೆ ಅವರು ತಿಳಿಸಿದರು.

ಇಂದು ಹುಮನಾಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 81ನೇ ಜನ್ಮ ದಿನದ ಅಂಗವಾಗಿ ಆರಂಭವಾದ ರಾಜೀವ್ ಗಾಂಧಿ ಜ್ಯೋತಿ ಯಾತ್ರೆಗೆ ಸ್ವಾಗತಿಸಿದ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೀನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗೆ ಹಲವು ಜನಪರ ಯೋಜನೆಗಳು ಜಾರಿಗೊಳಿಸಿದ್ದರು. ಇಂದಿನ ಯುವಕರು ಅವರ ತತ್ವ ಸಿದ್ದಾಂತ ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಓಂಕಾರ್ ತುಂಬಾ ಅವರು ಮಾತನಾಡಿ, ರಾಜೀವಗಾಂಧಿ ಅವರು ಕೇವಲ ಕಾಂಗ್ರೆಸ್‍ ಪಕ್ಷಕ್ಕೆ ಸೀಮಿತವಾಗಿರದೆ ಎಲ್ಲಾ ಜಾತಿ, ಧರ್ಮದ ವಿಶ್ವಾಸ ಗಳಿಸಿದ ದೇಶದ ಜ್ಯಾತ್ಯತೀತ ನಾಯಕರಾಗಿದ್ದರು. ಅಂತಹ ಮಹಾನ ನಾಯಕನ ಜ್ಯೋತಿ ಯಾತ್ರೆ ಯಶಸ್ವಿಯಾಗಲಿ ಎಂದರು.

ಈ ಸಂದರ್ಭದಲ್ಲಿ ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಧ್ಯಕ್ಷ ಅಫ್ಸರ್ ಮಿಯ್ಯಾ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News