×
Ad

ʼಮಹಾರಾಣಿ ಟ್ರೋಫಿʼಯ ಬೆಂಗಳೂರು ತಂಡಕ್ಕೆ ಬೀದರ್‌ನ ಇಬ್ಬರು ಆಯ್ಕೆ

Update: 2025-07-30 18:55 IST

ಬೀದರ್ : ಚೊಚ್ಚಲ ಆವೃತ್ತಿಯ ʼಮಹಾರಾಣಿ ಟ್ರೋಫಿʼ ಕೆಎಸ್‌ಸಿಎ ಟಿ20 ಟೂರ್ನಿಗೆ ಮಂಗಳವಾರ ಹರಾಜು ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯ ಇಬ್ಬರು ಯುವ ಆಟಗಾರ್ತಿಯರನ್ನು ಬೆಂಗಳೂರು ಬ್ಲಾಸ್ಟರ್ ತಂಡ ಖರೀದಿಸಿದೆ ಎಂದು ಅನೀಲಕುಮಾರ್ ದೇಶಮುಖ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಗರದ ಮಡಿವಾಳ ವೃತ್ತ ಹತ್ತಿರದ ಬಡಾವಣೆಯ ಸಾಕ್ಷಿ ಡೈಜೊಡೆ ಮತ್ತು ಭಾಲ್ಕಿ ಪಟ್ಟಣದ ಅದಿತಿ ಬಕ್ಕಾ ಅವರು ಬೆಂಗಳೂರು ಬ್ಲಾಸ್ಟರ್ ತಂಡದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಾಗಿದ್ದಾರೆ. ಈ ಇಬ್ಬರು ಯುವ ಆಟಗಾರ್ತಿಯರು ಕಳೆದ ವರ್ಷ ನಡೆದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಡೆಸುವ 23 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಮಹಾರಾಣಿ ಟ್ರೋಫಿಗೆ ಆಯ್ಕೆಯಾಗಿದ್ದು, ಬೀದರ್ ಜಿಲ್ಲೆಯ ಕ್ರೀಡಾಪಟುಗಳಿಗೆ ಖುಷಿ ತಂದಿದೆ.

ಇಬ್ಬರು ಆಟಗಾರ್ತಿಯರ ಆಯ್ಕೆಗೆ ಕೆಎಸ್‌ಸಿಎ ರಾಯಚೂರು ವಲಯದ ಬೀದರ್ ಜಿಲ್ಲೆಯ ಸಂಚಾಲಕ ಕುಶಾಲ್ ಪಾಟೀಲ್ ಗಾದಗಿ, ಸಂಜಯ್ ಜಾಧವ್, ಯುವರಾಜ್ ಯುನ್ನೆ ಮತ್ತು ವಿಕ್ಕಿ ಅಥವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News