LIVE - ಭಾರತ-ಪಾಕ್ ಕದನ ವಿರಾಮ | ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
Photo : ANI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಮಿಲಿಟರಿ ದಾಳಿಗಳ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ನಮ್ಮ ಸೇನೆ, ನೌಕಾಪಡೆ, ವಾಯುಪಡೆ, ಬಿಎಸ್‌ಎಫ್ ಮತ್ತು ಇತರ ಎಲ್ಲಾ ಪಡೆಗಳು ಎಚ್ಚರದಿಂದಿವೆ : ಪ್ರಧಾನಿ ಮೋದಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಹೊರತುಪಡಿಸಿ ಕಾಶ್ಮೀರದ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ ಎಂಬುದು ಜಗತ್ತಿಗೆ ನನ್ನ ಸಂದೇಶ: ಪ್ರಧಾನಿ ಮೋದಿ
ಪರಮಾಣು ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ: ಮೋದಿ
ಪಾಕಿಸ್ತಾನ ದಾಳಿಗಳನ್ನು ನಿಲ್ಲಿಸುವಂತೆ ನಮ್ಮ ಬಳಿ ವಿನಂತಿಸಿತು: ಪ್ರಧಾನಿ ಮೋದಿ
ಭಯೋತ್ಪಾದಕರು ಮತ್ತು ಅವರಿಗೆ ಆಶ್ರಯ ನೀಡುವವರ ನಡುವೆ ನಮಗೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ: ಮೋದಿ
ʼಆಪರೇಷನ್ ಸಿಂಧೂರ್ʼ ಈಗ ಭಯೋತ್ಪಾದಕರ ವಿರುದ್ಧದ ಭಾರತದ ನೀತಿಯಾಗಿದೆ: ಮೋದಿ
ನಾವು ಸದ್ಯಕ್ಕೆ ನಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ, ಪಾಕಿಸ್ತಾನದ ಕ್ರಮಕ್ಕೆ ನಮ್ಮ ತಕ್ಕ ಪ್ರತಿಕ್ರಿಯೆ ಇರುತ್ತದೆ: ಮೋದಿ
ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ: ಪ್ರಧಾನಿ ಮೋದಿ
'ರಾಷ್ಟ್ರ ಮೊದಲು' ಎಂಬುದು ನಮ್ಮ ಸಂಕಲ್ಪವಾದಾಗ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಪ್ರಧಾನಿ ಮೋದಿ
ಪಾಕಿಸ್ತಾನವು ಗಡಿ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಭೂಪಟದ ಮೇಲೆಯೇ ದಾಳಿ ನಡೆಸಿತು : ಪ್ರಧಾನಿ ಮೋದಿ