ಕರ್ನಾಟಕ-ತಮಿಳುನಾಡು ಗಡಿ ಬಳಿಯ ಕಾರ್ಯಪಾಳ್ಯ ಚೆಕ್ ಪೋಸ್ಟ್ ಗೆ ಮುತ್ತಿಗೆ ಹಾಕಿದ ಒಂಟಿ ಸಲಗ!
ಚಾಮರಾಜನಗರ : ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿಯ ಕಾರ್ಯಪಾಳ್ಯ ಚೆಕ್ ಪೋಸ್ಟ್‌ಗೆ ಒಂಟಿ ಸಲಗವೊಂದು ಮುತ್ತಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶವ ವ್ಯಾಪ್ತಿಗೆ ಒಳಪಟ್ಟಿದೆ. ಈ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಆನೆ, ಚಿರತೆ, ಹುಲಿ, ಕರಡಿ, ಕೆನ್ನಾಯಿ ಸೇರಿದಂತೆ ಮುಂತಾದ ಕಾಡು ಪ್ರಾಣಿಗಳು ವಾಸಿಸುತ್ತವೆ.
ಕರ್ನಾಟಕ ತಮಿಳುನಾಡು ಗಡಿ ಪ್ರದೇಶವಾಗಿರುವ ಕಾರ್ಯಪಾಳ್ಯ ಫಾರೆಸ್ಟ್ ಚೆಕ್ ಪೋಸ್ಟ್ ಗೆ ಬಂದ ಒಂಟಿ ಸಲಗ ಅಲ್ಲೇ ಇದ್ದ ಕಾರಿನತ್ತ ಬರಲು ಆರಂಭಿಸಿತು. ಇದನ್ನು ಕಂಡ ಫಾರೆಸ್ಟ್ ಸಿಬ್ಬಂದಿಯೊಬ್ಬರು ಶಬ್ದ ಮಾಡುವ ಮೂಲಕ ಕಾಡಾನೆಯನ್ನು ಕಾಡಿನತ್ತ ತೆರಳುವಂತೆ ಮಾಡಿದ್ದಾರೆ.
ಒಂಟಿ ಸಲಗ ಚಕ್ ಪೋಸ್ಟ್ ಗೆ ಬಂದಿದ್ದನ್ನು ಕಂಡ ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿಗಳು ಆತಂಕದಿಂದ ಇದ್ದರು. ಕಾಡಾನೆ ಕಾಡಿನತ್ತ ತೆರಳಿದ ಬಳಿಕ ನಿಟ್ಟಿಸಿರು ಬಿಟ್ಟರು.