ಪ್ರಧಾನಿ ಸಂವಾದದಲ್ಲಿ ಪಾಲ್ಗೊಂಡ ಅವೈಸ್ ಅಹ್ಮದ್

Update: 2026-08-23 00:34 IST

ಚಿಕ್ಕಮಗಳೂರು : ಜಿಲ್ಲೆಯ ಆಲ್ದೂರಿನ ಯುವ ಪ್ರತಿಭೆ, ಬಾಹ್ಯಾಕಾಶ ನವೋದ್ಯಮಿ ಅವೈಸ್ ಅಹ್ಮದ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮಹತ್ವದ ಸಂವಾದದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಹೈಪರ್‌ಸ್ಪೆಕ್ಟ್ರಲ್‌ ಅರ್ಥ್ ಇಮೇಜಿಂಗ್ ಉಪಗ್ರಹ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಪಿಕ್ಸೆಲ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಅವೈಸ್ ಅಹ್ಮದ್ ದಿಲ್ಲಿಯ ಸೇವಾತೀರ್ಥದಲ್ಲಿ ನಡೆದ ದೇಶದ ಆಯ್ದ ಇಪ್ಪತ್ತು ಪ್ರಮುಖ ಬಾಹ್ಯಾಕಾಶ ನವೋದ್ಯಮಗಳ ಮುಖ್ಯಸ್ಥರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಸಂವಾದದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಜಾಗತಿಕ ಬಾಹ್ಯಾಕಾಶ ನಾವಿನ್ಯತೆಯ ಕೇಂದ್ರವನ್ನಾಗಿ ರೂಪಿಸಲು ಖಾಸಗಿ ವಲಯದ ನವೋದ್ಯಮಿಗಳು ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.

ಉಪಗ್ರಹಗಳು, ರಾಕೆಟ್ ಅಭಿವೃದ್ಧಿ ಹಾಗೂ ಮುಂದುವರಿದ ಕಣ್ಣಾವಲು ತಂತ್ರಜ್ಞಾನಗಳು ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗದೆ. ಆಮಾನ್ಯ ಜನರ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ಬಳಕೆಯಾಗಬೇಕು ಎಂದಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News