×
Ad

ಚಿಕ್ಕಮಗಳೂರು | ಅಪಘಾತಕ್ಕೀಡಾಗಿದ್ದ ಕಾರು ಎಳೆದೊಯ್ಯುತ್ತಿದ್ದ ವೇಳೆ ಬೆಂಕಿಗಾಹುತಿ

Update: 2024-05-22 11:41 IST

ಚಿಕ್ಕಮಗಳೂರು, ಮೇ 22: ಅಪಘಾತಕ್ಕೀಡಾಗಿ ಜಖಂಗೊಂಡಿದ್ದ ಕಾರೊಂದನ್ನು ಟೋಯಿಂಗ್ ವಾಹನದ ಮೂಲಕ ಎಳೆದೊಯ್ಯುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ಸುಟ್ಟು ಭಸ್ಮವಾದ ಘಟನೆ ಕಳಸ ತಾಲೂಕಿನ ಸಂಸೆ ಸಮೀಪದ ಬಾಲ್ಗಲ್ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ಕಾರೊಂದು ರಸ್ತೆ ಬದಿಯಲ್ಲಿ ಶೇಖರಿಸಿಟ್ಟಿದ್ದ ಟಿಂಬರ್ ಮರಗಳಿಗೆ ಢಿಕ್ಕಿ ಹೊಡೆದು ಕೆಟ್ಟು ನಿಂತಿತ್ತು. ಅದನ್ನು ಬಳಿಕ ಟೋಯಿಂಗ್ ವಾಹನದ ಮೂಲಕ ಎಳೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಏಕಾಏಕಿ ಬೆಂಕಿಯ ಸ್ಪರ್ಶಕ್ಕೆ ಒಳಗಾದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಅಪಘಾತದ ವೇಳೆ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News